ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತ ಕೊನೆಗೂ ಪದಕದ ಖಾತೆ ತೆರೆಯುವುದನ್ನು ಖಚಿತಪಡಿಸಿಕೊಂಡಿದೆ. ಅಮಿತ್ ಹಾಗೂ ಮನೀಶ್ ಸೆಮೀಸ್ ಪ್ರವೇಶಿದ್ದು, ಭಾರತ ಇದೇ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಜಯಿಸಿದ ಸಾಧನೆ ಮಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಷ್ಯಾ(ಸೆ.19): ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ 2 ಪದಕ ಖಚಿತವಾಗಿದೆ. 52 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಗಲ್ ಹಾಗೂ 63 ಕೆ.ಜಿ ವಿಭಾಗದಲ್ಲಿ ಮನೀಶ್ ಕೌಶಿಕ್ ಸೆಮಿಫೈನಲ್ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ವಿಶ್ವ ಚಾಂಪಿಯನ್ಶಿಪ್ನ ಆವೃತ್ತಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆಲ್ಲಲಿದೆ.
ಚೀನಾ ಓಪನ್ ಬ್ಯಾಡ್ಮಿಂಟನ್: ಸಿಂಧು ಮುನ್ನಡೆ, ಸೈನಾ ಔಟ್
ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಕಾರ್ಲೊ ಪಾಲಮ್‌ರನ್ನು 4-1 ಅಂಕಗಳಿಂದ ಮಣಿಸಿದ ಏಷ್ಯನ್ ಚಾಂಪಿಯನ್ ಅಮಿತ್ ಸೆಮಿಫೈನಲ್ಗೇರಿದರು. ಇನ್ನು ಬ್ರೆಜಿಲ್‌ನ ವಾಂಡರ್‌ಸನ್ ಡಿ ಒಲಿವಿಯೆರಾ ವಿರುದ್ಧ 5-0 ಅಂತರದಲ್ಲಿ ಗೆದ್ದ ಮನೀಶ್ ಸಹ ಸೆಮೀಸ್‌ಗೆ ಲಗ್ಗೆಯಿಟ್ಟರು.
ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ
ಇದೇ ವೇಳೆ 91 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಈಕ್ವೆಡಾರ್ನ ಕ್ಯಾಸ್ಟಿಲ್ಲೋ ವಿರುದ್ಧ ಸೋತ ಸಂಜೀತ್ ಹಾಗೂ 57 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕವೀಂದರ್ ಬಿಶ್ತ್, ಬ್ರಿಟನ್‌ನ ಪೀಟರ್ ಮೆಕ್‌ಗ್ರೇಲ್ ವಿರುದ್ಧ ಸೋಲುಂಡು ಪದಕ ಅವಕಾಶ ಕೈಚೆಲ್ಲಿದರು.