ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ತಂಡವು ರೋಚಕವಾಗಿ ಯು.ಪಿ. ಯೋಧಾ ತಂಡವನ್ನು ರೋಚಕವಾಗಿ ಮಣಿಸಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ತಮಿಳ್ ತಲೈವಾಸ್ ಟೈ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಪುಣೆ[ಸೆ.19]: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪ್ಲೇ-ಅಫ್‌ಗೇರಲು ತಂಡಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದ್ದು, ಮಾಜಿ ಚಾಂಪಿಯನ್ ಯು ಮುಂಬಾ ಅಗತ್ಯ ಗೆಲುವು ಸಾಧಿಸಿದೆ.
2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್
ಬುಧವಾರ ಇಲ್ಲಿ ನಡೆದ ಯು.ಪಿ.ಯೋಧಾ ವಿರುದ್ಧದ ಪಂದ್ಯದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಯೋಧಾ ತಂಡ 6ನೇ ಸ್ಥಾನದಲ್ಲಿದ್ದು, ಪ್ಲೇ-ಆಫ್‌ಗೇರುವ ಭರವಸೆ ಉಳಿಸಿಕೊಂಡಿದೆ.
PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!
ಬುಧವಾರ ನಡೆದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ತಮಿಳ್ ತಲೈವಾಸ್ 36-36ರಲ್ಲಿ ಟೈ ಸಾಧಿಸಿತು. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ತಲೈವಾಸ್ಗೆ ಈ ಫಲಿತಾಂಶ ಹೆಚ್ಚಿನ ವ್ಯತ್ಯಾಸವನ್ನೇನೂ ಮಾಡದಿದ್ದರೂ, ಜಯದ ನಿರೀಕ್ಷೆಯಲ್ಲಿದ್ದ ಪುಣೆಗೆ ಆಘಾತವಾಯಿತು.
ಪುಣೆ 17 ಪಂದ್ಯಗಳಿಂದ ಕೇವಲ 5 ಗೆಲುವು ಸಾಧಿಸಿದ್ದು, ಇನ್ನುಳಿದ 5 ಪಂದ್ಯಗಳಲ್ಲಿ ಗೆದ್ದರೂ ಪ್ಲೇ-ಆಫ್ಗೇರುವುದು ಅನುಮಾನವೆನಿಸಿದೆ.