ಲಂಕಾ ವಿರುದ್ಧ ಪಾಕ್ ಸರಣಿ ಜಯ

By Kannadaprabha NewsFirst Published Oct 4, 2019, 11:43 AM IST
Highlights

ಪಾಕಿಸ್ತಾನ ತಂಡವು ತವರಿನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಜಯಿಸಿದೆ. ಒಂದು ದಶಕಗಳ ಬಳಿಕ ಪಾಕ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾಗೆ ಏಕದಿನ ಸರಣಿಯಲ್ಲಿ ನಿರಾಸೆ ಎದುರಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಕರಾಚಿ[ಅ.04]: ಆರಂಭಿಕ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ (133) ಭರ್ಜರಿ ಶತಕದ ಹೊರತಾಗಿಯೂ ಶ್ರೀಲಂಕಾ, ಪಾಕಿಸ್ತಾನ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆತಿಥೇಯ ಪಾಕಿಸ್ತಾನ 2-0ಯಲ್ಲಿ ಗೆದ್ದು ಕೊಂಡಿದೆ. 

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಸೆಹ್ವಾಗ್!

Abid, Fakhar and Haris help Pakistan to series win 3rd ODI Highlights 👇 https://t.co/7pb1Llqv3z

— Pakistan Cricket (@TheRealPCB)

ಶ್ರೀಲಂಕಾ ನೀಡಿದ 298 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ 123 ರನ್‌ಗಳ ಜೊತೆಯಾಟ ನಿರ್ವಹಿಸಿತು. ಆರಂಭಿಕರಾದ ಫಖರ್ ಜಮಾನ್ 76 ರನ್ ಬಾರಿಸಿದರೆ, ಆಬಿದ್ ಅಲಿ 74 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿಸ್ ಸೋಹೆಲ್ ಬಾರಿಸಿದ ಆಕರ್ಷಕ ಅರ್ಧಶತಕ ಪಾಕ್ ಗೆಲುವನ್ನು ಇನ್ನಷ್ಟು ಸುಲಭಗೊಳಿಸಿತು. ಈ ಮೂವರು ಬ್ಯಾಟ್ಸ್‌ಮನ್ ಗಳ ಅರ್ಧಶತಕದಿಂದಾಗಿ ಪಾಕ್ 48.2 ಓವರಲ್ಲಿ 5 ವಿಕೆಟ್‌ಗೆ 299 ರನ್‌ಗಳಿಸಿ ಜಯದ ನಗೆ ಬೀರಿತು.

ಹಳೆಯದನ್ನೆಲ್ಲಾ ಮರೆತು ಲಂಕಾ ಪಾಕ್‌ಗೆ ಮತ್ತೆ ಹೋಗಿದ್ದೇಕೆ..?

Well done boys!

Pakistan take the ODI series 2-0! 🏆 pic.twitter.com/Jzb4qqaDh1

— Pakistan Cricket (@TheRealPCB)

ಇದಕ್ಕೂ ಮುನ್ನ ಲಂಕಾ 50 ಓವರಲ್ಲಿ 9 ವಿಕೆಟ್‌ಗೆ 297 ರನ್‌ಗಳಿಸಿತ್ತು. ಧನುಷ್ಕಾ ಗುಣತಿಲಕ ಹೊರತು ಪಡಿಸಿ ಉಳಿದ್ಯಾವ ಲಂಕಾ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. 

ಇನ್ನು 3 ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 05ರಿಂದ ಆರಂಭವಾಗಲಿದೆ.ಮೂರೂ ಪಂದ್ಯಗಳಿಗೂ ಲಾಹೋರ್’ನ ಗಢಾಪಿ ಮೈದಾನ ಆತಿಥ್ಯ ವಹಿಸಲಿದೆ. 

ಸ್ಕೋರ್: 
ಶ್ರೀಲಂಕಾ 297/9
ಪಾಕಿಸ್ತಾನ 299/5
 

click me!