BCCIನಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

Published : Aug 25, 2026, 04:08 PM IST
BCCI Logo

ಸಾರಾಂಶ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ಕ್ರಿಕೆಟ್ ಸಮಿತಿಯ ಐದು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, ಐದು ವರ್ಷಗಳ ಹಿಂದೆ ನಿವೃತ್ತರಾದ ಮಾಜಿ ಕ್ರಿಕೆಟಿಗರು ಸೆಪ್ಟೆಂಬರ್ 5, 2026 ರೊಳಗೆ ಅರ್ಜಿ ಸಲ್ಲಿಸಬಹುದು.

ಟೀಂ ಇಂಡಿಯಾ, ಸದ್ಯ ಶ್ರೀಲಂಕಾ ಪ್ರವಾಸದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಗಿಲ್ ನೇತೃತ್ವದ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿದೆ. ಇದರ ನಡುವೆಯೇ ಬಿಸಿಸಿಐ ಜೂನಿಯರ್ ಕ್ರಿಕೆಟ್ ಸಮಿತಿಯಲ್ಲಿ ಐದು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು ತ್ತು ಐದು ವರ್ಷಗಳ ಹಿಂದೆ ನಿವೃತ್ತರಾಗಿರಬೇಕು. ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 05, 2026.

ಬಿಸಿಸಿಐನಿಂದ ಬಂತು ಕರೆ: ಕ್ರಿಕೆಟ್ ಭವಿಷ್ಯ ನಿಮ್ಮ ಕೈಯಲ್ಲಿ!

ಜೂನಿಯರ್ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಿದ್ಧತೆಗಳನ್ನು ಆರಂಭ ಮಾಡಿದೆ. ಇದರಂತೆ ಜೂನಿಯರ್ ಕ್ರಿಕೆಟ್ ಸಮಿತಿಯಲ್ಲಿ ಐದು ಸ್ಥಾನಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹೊಸ ಸಮಿತಿಯು 22 ವರ್ಷದೊಳಗಿನವರ ಹಂತದವರೆಗಿನ ಭಾರತೀಯ ತಂಡಗಳನ್ನು ಆಯ್ಕೆ ಮಾಡುವುದು, ಯುವ ಪ್ರತಿಭೆಗಳನ್ನು ಹುಡುಕುವುದು, ನಾಯಕರನ್ನು ಆಯ್ಕೆ ಮಾಡುವುದು ಮತ್ತು ತರಬೇತಿ ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5, 2026. ಅರ್ಹ ಅಭ್ಯರ್ಥಿಗಳು ಸಂಜೆ 5 ಗಂಟೆವರೆಗೂ ಅರ್ಜಿ ಸಲ್ಲಿಸಬಹುದು. ಬಿಸಿಸಿಐ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡುತ್ತದೆ. ಆಯ್ಕೆಯಾದ ಅರ್ಭರ್ಥಿಗಳನ್ನು ವೈಯುಕ್ತಿಕ ಸಂದರ್ಶನಗಳಿಗೆ ಕರೆಯಲಾಗುವುದು ಮತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ, ಐದು ಸದಸ್ಯರನ್ನು ನೇಮಿಸಲಾಗುವುದು.

ಅರ್ಜಿ ಸಲ್ಲಿಸಲು ಷರತ್ತುಗಳು ಅನ್ವಯ

ಜೂನಿಯರ್ ಕ್ರಿಕೆಟ್ ಸಮಿತಿಗೆ ಸೇರಲು ಬಿಸಿಸಿಐ ಕಟ್ಟುನಿಟ್ಟನ ಷರತ್ತುಗಳನ್ನು ಮಾಡಿದೆ. ಅರ್ಜಿದಾರರು ಮಾಜಿ ಕ್ರಿಕೆಟಿಗರಾಗಿರಬೇಕು. ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿವೃತ್ತರಾಗಿರಬೇಕು. ಬಿಸಿಸಿಐ ನಿಯಮಗಳ ಪ್ರಕಾರ, ಒಟ್ಟು ಐದು ವರ್ಷಗಳ ಕಾಲ ಕ್ರಿಕೆಟ್ ಸಮಿತಿಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಆ ಸ್ಥಾನಕ್ಕೆ ಅರ್ಹರಲ್ಲ.

22 ವರ್ಷದೊಳಗಿನ ವಿವಿಧ ವಯೋಮಾನದ ತಂಡಗಳ ನ್ಯಾಯಯುತ ಮತ್ತು ಪಾರದರ್ಶಕ ಆಯ್ಕೆಯನ್ನು ಖಚಿತಪಡಿಸಿಕೊಳ್ಳುವುದು ಹೊಸ ಸಮಿತಿಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಹೊಸ ಪ್ರತಿಭೆಗಳನ್ನು ಗುರುತಿಸಲು ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಟಗಾರರ ಪ್ರದರ್ಶನವನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಸಮಿತಿಯ ಕಾರ್ಯಗಳು ಕೇವಲ ಕ್ರಿಕೆಟಿಗರಿಗೆ ಸೀಮಿತವಾಗಿರುವದಿಲ್ಲ. ತರಬೇತುದಾರರು, ವಿಶ್ಲೇಷಕರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಯಾ ತಂಡಗಳಿಗೆ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಸಹ ಪರಿಶೀಲಿಸುತ್ತದೆ. ಜೊತೆಗೆ ಬಿಸಿಸಿಐ ಜೂನಿಯರ್ ಪಂದ್ಯಾವಳಿಗಳು ಮತ್ತು ವಿದೇಶಿ ಪ್ರವಾಸಗಳ ಸಂಘಟನೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹ ಸಮಿತಿ ನಿರ್ವಹಿಸುತ್ತದೆ.

ಯುವ ಆಟಗಾರರನ್ನು ಮೈದಾನದ ಹೊರಗಿನ ಸವಾಲುಗಳಿಗೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಈ ಸಮಿತಿ ಹೊಂದಿರುತ್ತದೆ. ಯುವ ಆಟಗಾರರಿಗೆ ಮಾದಕ ದ್ರವ್ಯ ಸೇವನೆ ಮತ್ತು ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್‌ನ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಆಟಗಾರರಲ್ಲಿ ಬಲವಾದ ಕ್ರೀಡಾ ನೀತಿಯನ್ನು ಬೆಳೆಸುವುದು ಸಮಿತಿಯ ಗುರಿಯಾಗಿದೆ. ಮುಂಬರುವ ದೇಶೀಯ ಟೂರ್ನಿಗೆ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕುತ್ತಿದ್ದು, ಅಂತಿಮ ನಿರ್ಧಾರ ಬಾಕಿ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದ ವೈಭವ್ ಸೂರ್ಯವಂಶಿ..! ವಿಡಿಯೋ ವೈರಲ್
ಆರ್‌ಸಿಬಿ ಮಾಜಿ ಆಟಗಾರನ 'ಜೆನ್ ಝೀ' ಸೆಲೆಬ್ರೇಷನ್, ಕೌಂಟಿ ಅಂಗಳದಲ್ಲಿ ಚಹಲ್ ಹೊಸ ಅವತಾರ