ಆರ್‌ಸಿಬಿ ಮಾಜಿ ಆಟಗಾರನ 'ಜೆನ್ ಝೀ' ಸೆಲೆಬ್ರೇಷನ್, ಕೌಂಟಿ ಅಂಗಳದಲ್ಲಿ ಚಹಲ್ ಹೊಸ ಅವತಾರ

Published : Aug 25, 2026, 02:08 PM IST
yuzvendra chahal

ಸಾರಾಂಶ

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಯಜುವೇಂದ್ರ ಚಹಲ್, 3 ವಿಕೆಟ್ ಪಡೆದು ಮಿಂಚಿದ್ದಾರೆ. ವಿಕೆಟ್ ಪಡೆದ ನಂತರ 'ಜೆನ್ ಝೀ' ಶೈಲಿಯಲ್ಲಿ ಸಂಭ್ರಮಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ಇಂಗ್ಲೆಂಡ್‌ನಲ್ಲಿರುವ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ಆರ್‌ಸಿಬಿ ಮಾಜಿ ಆಟಗಾರ ಯಜುವೇಂದ್ರ ಚಹಲ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ವಿಕೆಟ್ ಪಡೆದ ಖುಷಿಯಲ್ಲಿ ಜೆನ್ ಝೀ ಸ್ಟೈಲ್‌ನಲ್ಲಿ ಸಂಭ್ರಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕೌಂಟಿಯಲ್ಲಿ ಮಿಂಚಿದ ಯಜುವೇಂದ್ರ ಚಹಲ್

ಟೀಂ ಇಂಡಿಯಾದ ಪ್ರಮುಖ ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಹಲ್ ಅವರು ಸದ್ಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಕಾರಣ ಇಂಗ್ಲೆಡ್‌ನ ಕೌಂಟಿ ಕ್ರಿಕೆಟ್ ಕಡೆ ಮುಖ ಮಾಡಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡದ ಪರ ಆಡುತ್ತಿರುವ ಚಹಲ್, ಮೂರು ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ನಾರ್ಥಾಂಪ್ಟನ್‌ಶೈರ್ ಪರ ಕೌಂಟಿಯಲ್ಲಿ ಕಣಕ್ಕೆ ಇಳಿದಿರುವ ಚಹಲ್, ಲಂಕಾಷೈರ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದ ಸಂದರ್ಭದಲ್ಲಿ '6-7' ಸೆಲಬ್ರೇಷನ್ ರೀ ಕ್ರಿಯೇಟ್ ಮಾಡಿ ಗಮನ ಸೆಳೆದರು. ಈ ಹಿಂದೆ ದೆಹಲಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಮೇಧವಿ ಬಿಧುರಿ ಈ ಸೆಲಬ್ರೇಷನ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಮತ್ತು ಲಂಕಾಷೈರ್ ನಡುವಿನ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಲಂಕಾಷೈರ್ ಬ್ಯಾಟ್ಸ್‌ಮನ್ ಜೋ ಮೂರ್ಸ್ ಅವರನ್ನು ಔಟ್ ಮಾಡಿದ ನಂತರ ಚಹಲ್ ಸಂಭ್ರಮಿಸಿ ಗಮನ ಸೆಳೆದರು.

ಈ ವಿಡಿಯೋವನ್ನು ಚಹಲ್ ಅವರೇ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು, ಅಲ್ಗಾರಿದಮ್ ಅನ್ನು ಮೀರಿಸುವ ಕೆಲಸ ಅಂತ ಹಾಸ್ಯವಾಗಿ ಬರೆದುಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ. ಇದರೊಂದಿಗೆ ಚಹಲ್, ತಮ್ಮದೇ ಆದ ಟ್ರೆಂಡ್ ಸೇರ್ಪಡೆ ಮಾಡಿದ್ದಾರೆ.

ಸಂಭ್ರಮಾಚರಣೆಯಲ್ಲಿ ಮಾತ್ರವಲ್ಲದೇ, ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಸ್ಪೆಲ್‌ನಲ್ಲಿ 39 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದುಕೊಂಡಿದ್ದು, ಈ ಪಂದ್ಯವನ್ನು ನಾರ್ಥಾಂಪ್ಟನ್‌ಶೈರ್ ತಂಡ ಪಂದ್ಯದಲ್ಲಿ ಗೆಲುವು ಪಡೆದುಕೊಂಡಿದೆ. 1999ರ ನಂತರ ಓಲ್ಡ್ ಟ್ರಾಫರ್ಡ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡ ಕೆಂಪು ಚೆಂಡಿನ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಗೆಲುವು ಪಡೆದುಕೊಂಡಿದೆ.

ಏನಿದು 'ಜೆನ್ ಝೀ' ಸೆಲೆಬ್ರೇಷನ್?

2026ರ ಮಹಿಳಾ ದೆಹಲಿ ಪ್ರೀಮಿಯರ್ ಲೀಗ್‌ನ ಪಂದ್ಯದ ಸಮಯದಲ್ಲಿ ಈ ಆಚರಣೆ ಸಖತ್ ವೈರಲ್ ಆಗಿತ್ತು. ದೆಹಲಿ ಆಟಗಾರ್ತಿ ಮೇಧವಿ ಬಿಧುರಿ ವಿಕೆಟ್ ಪಡೆದ ನಂತರ ತಮ್ಮ ಕೈಯಲ್ಲಿ ವಿಶಿಷ್ಠ ಆಚರಣೆ ಮಾಡಿದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಚಹಲ್ ಈ ರೀತಿಯೇ ಸಂಭ್ರಮಾಚರಣೆ ಮಾಡಿದ್ದು, ಇಂಗ್ಲೆಂಡ್ ಕೌಂಟಿಗೂ ಸಂಭ್ರಮಾಚರಣೆ ಕಾಲಿಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿನ ಚೆಂಡು ₹32 ಕೋಟಿಗೆ ಹರಾಜು; ಖರೀದಿದಾರ ಯಾರು?
"ತಾತ ರೈತ, ತಂದೆ ಯೋಧ!": ಧ್ರುವ್ ಜುರೆಲ್ ಶತಕದ ಬಳಿಕ ‘ಜೈ ಜವಾನ್, ಜೈ ಕಿಸಾನ್’ ಟ್ಯಾಟೂ ಮೆರೆಸಿದ್ದೇಕೆ ಗೊತ್ತಾ?