ಜಿಆರ್’ವಿಗೆ ಲಕ್ಷ್ಮಣ್ ಗೌರವ, ಆಟೋಗ್ರಾಫ್’ನಲ್ಲಿ ’ವಿಶಿ’ಗೆ ಗುರುವಂದನೆ

By Web Desk  |  First Published Dec 24, 2018, 5:47 PM IST

ನಗರದಲ್ಲಿ ವಿವಿಎಸ್ ಲಕ್ಷ್ಮಣ್ ಅವರ ’281 and Beyond’(281 ಅಂಡ್ ಬಿಯಾಂಡ್) ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಜತೆಯಾಗಿ ಆಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ.


ಬೆಂಗಳೂರು[ಡಿ.24]: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಕ್ರಿಕೆಟ್ ದಂತಕತೆ ಜಿ.ಆರ್ ವಿಶ್ವನಾಥ್ ಅವರನ್ನು ’ಜೀನಿಯಸ್’ ಎಂದು ಕರೆಯುವ ಮೂಲಕ ತಮ್ಮ ಹಸ್ತಾಕ್ಷರವಿರುವ ಆತ್ಮಚರಿತ್ರೆಯನ್ನು ಜಿಆರ್’ವಿಗೆ ನೀಡಿದರು.

ಅನಿಲ್ ಕುಂಬ್ಳೆ ರಾಜೀನಾಮೆ ಸೀಕ್ರೆಟ್ಸ್ ಬಿಚ್ಚಿಟ್ಟ ಲಕ್ಷ್ಮಣ್..!

ನಗರದಲ್ಲಿ ವಿವಿಎಸ್ ಲಕ್ಷ್ಮಣ್ ಅವರ ’281 and Beyond’(281 ಅಂಡ್ ಬಿಯಾಂಡ್) ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಜತೆಯಾಗಿ ಆಡಿದ ದಿನಗಳನ್ನು ಮೆಲುಕು ಹಾಕಿದರು. ಜಿಆರ್’ವಿ, ಇಎಎಸ್ ಪ್ರಸನ್ನ, ಸೈಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.   

Latest Videos

ಸೌರವ್ ಗಂಗೂಲಿ ನಾಯಕತ್ವ ಉಳಿಸಿತ್ತು ಲಕ್ಷ್ಮಣ್ 281 ರನ್!

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್, ’1983ರಲ್ಲಿ ಕಪಿಲ್ ದೇವ್ ವಿಶ್ವಕಪ್ ಎತ್ತಿಹಿಡಿದಾಗ, ನಾನೂ ದೇಶದ ಪರವಾಗಿ ಕ್ರಿಕೆಟ್ ಆಡಬೇಕು ಎಂದು ಕನಸು ಕಂಡಿದ್ದೆ. ಆ ಸಮಯಕ್ಕೆ ಅದು ಕೈಗೆಟುಕದ ಕನಸಾಗಿತ್ತು. ಏಕೆಂದರೆ ನಾನಾಗ ಶಾಲಾ ಕ್ರಿಕೆಟ್ ತಂಡದ ಆಟಗಾರನೂ ಆಗಿರಲಿಲ್ಲ. ಆದರೆ ಸತತ ಪರಿಶ್ರಮದಿಂದ ನಾನು ನನ್ನ ಕನಸನ್ನು ನನಸಾಗಿಸಿಕೊಂಡೆ’ ಎಂದು ಭಾರತ ಪರ 134 ಟೆಸ್ಟ್ ಹಾಗೂ 86 ಏಕದಿನ ಪಂದ್ಯಗಳನ್ನಾಡಿದ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಲಕ್ಷ್ಮಣ್ ಆತ್ಮಕಥೆಯಲ್ಲಿ ಬಯಲಾಯ್ತು ಧೋನಿಯ ಮತ್ತೊಂದು ಮುಖ!

ಇದೇ ವೇಳೆ ತಮ್ಮ ’281 and Beyond’ ಪುಸ್ತಕವನ್ನು ಜಿಆರ್ ವಿಶ್ವನಾಥ್ ಅವರಿಗೆ ನೀಡಿದ ಲಕ್ಷ್ಮಣ್, ನೀವು ನನ್ನ ಪಾಲಿಗೆ ಸ್ಫೂರ್ತಿದಾಯಕ ಆಟಗಾರನಾಗಿರುವುದಕ್ಕೆ ನಾನು ನಿಮಗೆ ಚಿರಋಣಿಯಾಗಿದ್ದೇನೆ. ನೀವೊಬ್ಬ ಜೀನಿಯಸ್ ಕ್ರಿಕೆಟಿಗ, ನನ್ನ ಕ್ರಿಕೆಟ್ ಬದುಕಿನ ಬೆಳವಣಿಗೆಗೆ ನೀವೇ ಸ್ಫೂರ್ತಿ ಎಂದು ಹಸ್ತಾಕ್ಷರ ನೀಡಿದ್ದಾರೆ. 

ಕನ್ನಡದ ದಿಗ್ಗಜ ಬ್ಯಾಟ್ಸ್’ಮನ್ ಜಿಆರ್. ವಿಶ್ವನಾಥ್ ಭಾರತ ಪರ 91 ಟೆಸ್ಟ್ ಹಾಗೂ 25 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 

ಈ ಸುದ್ದಿಯನ್ನು ಇಂಗ್ಲೀಷ್’ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

click me!