ಮೆಲ್ಬರ್ನ್ ಟೆಸ್ಟ್: ದ್ರಾವಿಡ್‌ ದಾಖಲೆ ಮುರೀತಾರಾ ವಿರಾಟ್‌?

By Web Desk  |  First Published Dec 24, 2018, 3:17 PM IST

1983ರಲ್ಲಿ ಮೋಹಿಂದರ್‌ ಅಮರ್‌ನಾಥ್‌ ಬಾರಿಸಿದ್ದ 1065 ರನ್‌ ದಾಖಲೆಯನ್ನು 2002ರಲ್ಲಿ ರಾಹುಲ್‌ ದ್ರಾವಿಡ್‌ ಮುರಿದಿದ್ದರು. ಭಾರತ ತಂಡದ ಮಾಜಿ ನಾಯಕ 1137 ರನ್‌ ಕಲೆಹಾಕಿ, ದಾಖಲೆಯನ್ನು ಈಗಲೂ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ.


ಮೆಲ್ಬರ್ನ್‌[ಡಿ.24]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಹೊಸ್ತಿಲಲ್ಲಿದ್ದಾರೆ. ಕ್ಯಾಲೆಂಡರ್‌ ವರ್ಷದಲ್ಲಿ ಭಾರತದಾಚೆ ಗರಿಷ್ಠ ಟೆಸ್ಟ್‌
ರನ್‌ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ಬರೆಯಲು ಕೊಹ್ಲಿಗೆ ಕೇವಲ 82 ರನ್‌ಗಳ ಅವಶ್ಯಕತೆ ಇದೆ. 

1983ರಲ್ಲಿ ಮೋಹಿಂದರ್‌ ಅಮರ್‌ನಾಥ್‌ ಬಾರಿಸಿದ್ದ 1065 ರನ್‌ ದಾಖಲೆಯನ್ನು 2002ರಲ್ಲಿ ರಾಹುಲ್‌ ದ್ರಾವಿಡ್‌ ಮುರಿದಿದ್ದರು. ಭಾರತ ತಂಡದ ಮಾಜಿ ನಾಯಕ 1137 ರನ್‌ ಕಲೆಹಾಕಿ,
ದಾಖಲೆಯನ್ನು ಈಗಲೂ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. 

ಜಡೇಜಾ ಫಿಟ್ನೆಸ್‌ ಗುಟ್ಟು ಮುಚ್ಚಿಟ್ಟಿದ್ದ ಭಾರತ!

Latest Videos

undefined

16 ವರ್ಷಗಳ ದಾಖಲೆಯನ್ನು ಮುರಿಯುವ ಅವಕಾಶ ಕೊಹ್ಲಿಗಿದ್ದು, ಪರ್ತ್ ಟೆಸ್ಟ್‌ನಲ್ಲಿ ಶತಕ ಬಾರಿಸಿ ಲಯಕ್ಕೆ ಮರಳಿದ್ದಾರೆ. 2018ರಲ್ಲಿ ವಿರಾಟ್‌ ಹಲವು ದಾಖಲೆಗಳನ್ನು ಬರೆದಿದ್ದು, ಮತ್ತೊಂದು
ಮಹತ್ವದ ದಾಖಲೆ ನಿರ್ಮಿಸುವ ಅವಕಾಶ ಅವರಿಗಿದೆ. 

ಒಂದುವೇಳೆ ರಾಹುಲ್ ದ್ರಾವಿಡ್ ದಾಖಲೆಯನ್ನು ಅಳಿಸಿಹಾಕಬೇಕಾದರೆ ವಿರಾಟ್ ಕೊಹ್ಲಿ ಮೆಲ್ಬರ್ನ್ ಟೆಸ್ಟ್’ನಲ್ಲಿ 82 ರನ್ ಬಾರಿಸಲೇ ಬೇಕಾಗಿದೆ. ಏಕೆಂದರೆ 2018ರ ಕ್ಯಾಲೆಂಡರ್ ವರ್ಷದಲ್ಲಿ ವಿರಾಟ್ ಕೊಹ್ಲಿ ಆಡುತ್ತಿರುವ ಕೊನೆಯ ಟೆಸ್ಟ್ ಇದಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26ರಂದು ಮೆಲ್ಬರ್ನ್ ಮೈದಾನದಲ್ಲಿ ಆರಂಭವಾಗಲಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಸಾಕ್ಷಷ್ಟು ಕುತೂಹಲ ಕಾರಣವಾಗಿದೆ.

click me!