ಟೆಸ್ಟ್ ಚಾಂಪಿಯನ್‌ಶಿಪ್ ವಿನ್ನರ್ ಭವಿಷ್ಯ ನುಡಿದ ಸೆಹ್ವಾಗ್!

By Web DeskFirst Published Aug 27, 2019, 9:05 PM IST
Highlights

ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭಗೊಂಡಿದೆ. ರೋಚಕ ಹೋರಾಟ ಟೆಸ್ಟ್ ಮಾದರಿಗೆ ಹೊಸ ರೂಪ ನೀಡಿದೆ. ಇದೀಗ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟೂರ್ನಿಯ ಚಾಂಪಿಯನ್ ಕಿರೀಟ ಯಾರಿಗೆ ಎಂದು ಭವಿಷ್ಯ ನುಡಿದಿದ್ದಾರೆ.

ದೆಹಲಿ(ಆ.27): ಆ್ಯಷಸ್ ಟೆಸ್ಟ್ ಸರಣಿ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌‌ಶಿಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾದ ಟೆಸ್ಟ್ ಚಾಂಪಿಯನ್‌‌ಶಿಪ್‌ಗೆ ಚಾಲನೆ ಸಿಕ್ಕಿದೆ. ಈಗಾಗಲೇ ಟೀಂ ಇಂಡಿಯಾ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. 2021ರಲ್ಲಿ ಫೈನಲ್ ಪಂದ್ಯದ ಮೂಲಕ ಈ ಟೂರ್ನಿ ಅಂತ್ಯವಾಗಲಿದೆ. ಇದೀಗ  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಚಾಂಪಿಯನ್ ಯಾರು ಅನ್ನೋದರ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗ ಸೆಹ್ವಾಗ್‌ ಮದುವೆ ಆಗಿದ್ದು ಜೇಟ್ಲಿ ಮನೆಯಲ್ಲಿ!

ಆಸ್ಟ್ರೇಲಿ ಹಾಗೂ ಇಂಗ್ಲೆಂಡ್, ಶ್ರೀಲಂಕಾ ಹಾಗೂ ನ್ಯೂಜಿಲೆಂಡ್, ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡದ ಪ್ರದರ್ಶನಗಳನ್ನು ಗಮನಿಸಿದರೆ ಕೊಹ್ಲಿ ಸೈನ್ಯ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಗೆಲ್ಲಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್; ಇಲ್ಲಿದೆ ನಿಯಮ, ವೇಳಾಪಟ್ಟಿ ವಿವರ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸುದೀರ್ಘ ಸರಣಿ. ಹೀಗಾಗಿ ಪ್ರತಿ ತಂಡ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಆದರೆ ಟೆಸ್ಟ್ ಮಾದರಿಯಲ್ಲಿ ಭಾರತ ಬಲಿಷ್ಠವಾಗಿದೆ. ಹೀಗಾಗಿ ಮೊದಲ ಟೆಸ್ಟ್ ಚಾಂಪಿಯನ್‌ಶಿಪ್ ಕಿರೀಟ ಭಾರತದ ಪಾಲಾಗಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. 
 

click me!