ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

By Web Desk  |  First Published Aug 27, 2019, 8:05 PM IST

ಬ್ಯಾಡ್ಮಿಂಟನ್‌ ಅಂದರೆ ಸಾಕು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತೆ. ಇದಕ್ಕೆ ಕಾರಣ ಚಾಂಪಿಯನ್ ಕೋಚ್ ಪುಲ್ಲೇಲ ಗೋಪಿಚಂದ್. ಹೈದರಾಬಾದ್ ಭಾರತದ ಬ್ಯಾಡ್ಮಿಂಟನ್ ರಾಜಧಾನಿಯನ್ನಾಗಿಸಿದ ಕೀರ್ತಿ ಇದೇ ಪುಲ್ಲೇಲ ಗೋಪಿಚಂದ್‌ಗೆ ಸಲ್ಲಲಿದೆ.  ಗೋಪಿಚಂದ್ ಗರಡಿಯಲ್ಲಿ ಪಳಗಿದ ಪಿವಿ ಸಿಂಧು ಇದೀಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್. ಸಿಂಧು ಮಾತ್ರವಲ್ಲ, ಸೈನಾ ನೆಹ್ವಾಲ್, ಪಿ ಕಶ್ಯಪ್, ಕಿಡಂಬಿ ಶ್ರೀಕಾಂತ್ ಸೇರಿದಂತೆ ಚಾಂಪಿಯನ್ ಶಟ್ಲರ್‌ಗಳಿಗೆ ಗೋಪಿಚಂದ್ ಕೋಚ್. ಶಿಷ್ಯರಿಗೆ ಬಂಗಾರದ ಕಿರೀಟ ತೊಡಿಸುತ್ತಿರುವ ಈ ಬಂಗಾರದ ಮನುಷ್ಯನ ರೋಚಕ ಜರ್ನಿ ಇಲ್ಲಿದೆ. 


ಪಿವಿ‌ ಸಿಂಧು...ವಿಶ್ವ ಬ್ಯಾಡ್ಮಿಂಟನ್  ಚಾಂಪಿಯನ್ , ಕಂಗ್ರಾಟ್ಸ್ .....ಅದಕ್ಕಿಂತಲೂ ಹೆಚ್ಚಿನ ಅಭಿನಂದನೆ ನಿನ್ನ ಗುರು ದ್ರೋಣಾಚಾರ್ಯ, ಪದ್ಮಶ್ರೀ, ಆಲ್ ಇಂಗ್ಲೆಂಡ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್‍‌ಗೆ....

ತುಂಬ ಚಾಂಪಿಯನ್ ಗಳಿಗೆ ತಮ್ಮ ದಾಖಲೆಯನ್ನ ಯಾರೂ ಮುರಿಯುವುದು ಬೇಕಿರುವುದಿಲ್ಲ. ಮುರಿದೇ ಬಿಟ್ಟರೇ ಕೊರಗಿಯೇ ಊಟ ಬಿಟ್ಟಾರು .ಪುಲ್ಲೇಲ ಹಾಗಲ್ಲ....ಪ್ರಕಾಶ್ ಪಡುಕೋಣೆ( ದೀಪಿಕಾ ಪಡುಕೋಣೆ ಅಪ್ಪ) ನಂತರ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ಗೆದ್ದ ಭಾರತದ‌ ಹೆಮ್ಮೆ. ಅವನಿಗೆ ಗುರಿಗಳಿದ್ದವು....ಒಲಿಂಪಿಕ್ ಪದಕ ಬೇಟೆಯ ಗುರಿ....ಚೈನಾ, ಜಪಾನ್ , ಇಂಡೋನೇಷ್ಯಾ, ಮಲೇಷ್ಯಾ ಷಟ್ಲರ್ ಗಳನ್ನ ಹೆಡೆಮುರಿ ಕಟ್ಟುವ ಗುರಿ...

Latest Videos

undefined

ಇದನ್ನೂ ಓದಿ: ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು

ಚಾಂಪಿಯನ್ ಗಳನ್ನ ತಯಾರು ಮಾಡಬೇಕೆಂದು ಕೊಂಡಿದ್ದೇ ಅದಕ್ಕೆ. ಆದರೆ ಪುಲ್ಲೇಲ ಕುಬೇರನ ಮನೆಯಲ್ಲಿ ಹುಟ್ಟಿದವನಲ್ಲ. ಚಿಕ್ಕವನಿದ್ದಾಗ ಅವನಿಗೆ ಇಡೀ ದಿನಕ್ಕೆ ಆಡಲು ಸಿಗುತ್ತಿದ್ದುದು ಒಂದೇ ಒಂದು ಷಟಲ್. ಅದಕ್ಕೂ ಹಣ ಹೊಂದಿಸಲು ಕಷ್ಟ.  ಮಗನಲ್ಲಿ ಅಂದೇ ಚಾಂಪಿಯನ್ ನನ್ನ ಕಂಡಿದ್ದ ತಾಯಿ ಬಸ್ ಚಾರ್ಜ್ ಉಳಿಸಲು ನಡೆದೇ ಹೋಗುತ್ತಿದ್ದಳು...ಉಳಿದ ಎರಡು ರುಪಾಯಿ ಮಗನ‌ ಷಟಲ್ ಖರ್ಚಿಗೆ...

ಇದನ್ನೂ ಓದಿ: ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ಸಿಂಧುಗೆ ಬಹುಮಾನ ಘೋಷಿಸಿದ ಯಡಿಯೂರಪ್ಪ

ಮುಂದೆ ಯಾರಿಗೂ ಹೀಗಾಗ ಬಾರದೆಂದು ಅಂತಾರಾಷ್ಟ್ರೀಯ ಗುಣಮಟ್ಟದ ಅಕಾಡೆಮಿ ತೆರೆಯಲು ನಿರ್ಧರಿಸಿದ್ದ. ಆಲ್‌ ಇಂಗ್ಲೆಂಡ್ ಗೆದ್ದಾಗ ಚಂದ್ರಬಾಬು ನಾಯ್ಡು ಕರೆದು ಐದು ಎಕರೆ ಜಮೀನು ಕೊಟ್ಟಿದ್ದರು..ಆ ಜಮೀನೆ ಅಕಾಡೆಮಿಗೆ ಜಾಗ..ಒಂಬತ್ತು ಅಂಕಣಗಳ ಅಕಾಡೆಮಿ...ಮನೆಯನ್ನ ಒತ್ತೆ ಇಟ್ಟು ಅಕಾಡೆಮಿ ಕಟ್ಟಿದ ಇನ್ನೊಬ್ಬನ ಬಗ್ಗೆ  ನಾನು‌ ಕೇಳಿಲ್ಲ....ಪುಲ್ಲೇಲ ಮಾಡಿದ್ದ....ಅವನಿಗೆ ಒಲಿಂಪಿಕ್‌ ಕನಸಿತ್ತು...

ಇದನ್ನೂ ಓದಿ: ನನ್ನನ್ನು ಪ್ರಶ್ನಿ​ಸಿ​ದ​ವ​ರಿಗೆ ಉತ್ತರ ನೀಡಿ​ದ್ದೇನೆ: ಸಿಂಧು!

2008..ಅವನ‌ ಕನಸಿನ ಅಕಾಡೆಮಿಯಲ್ಲಿ ಮೊದಲ ಷಟಲ್ ಹಾರಿತ್ತು....
ಪುಲ್ಲೇಲ ಇವತ್ತಿಗೂ ಏಳುವುದು ಬೆಳಗಿನ ಜಾವ 3 ಗಂಟೆಗೆ...4 ಗಂಟೆಗೆ ಬಂಗಾರದ ಮಕ್ಕಳೊಂದಿಗೆ ಆಡುತ್ತಿರುತ್ತಾನೆ....2012 ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸೈನಾ, 2016 ರಿಯೋ ಒಲಿಂಪಿಕ್ ಬೆಳ್ಳಿ ಗೆದ್ದ ಪಿವಿ ಸಿಂಧು ಕೂಡಾ 4 ಗಂಟೆಗೆಲ್ಲಾ ಕೋರ್ಟ್ ನಲ್ಲಿರಬೇಕಿತ್ತು..ಗೊತ್ತಿರಲಿ ಅಂತಾ ಹೇಳ್ತೀನಿ..

ಸಿಂಧು ಅಪ್ಪ ಪಿವಿ ರಮಣ 12 ವರ್ಷಗಳ ಕಾಲ ಪ್ರತೀ ದಿನ ಮರೇದಪಲ್ಲಿಯಿಂದ ಗಚಿಬೌಲಿ ಕ್ರೀಡಾಂಗಣದ ವರೆಗೆ ದಿನಕ್ಕೆರಡು ಬಾರಿ ಅಂದರೆ ಒಟ್ಟು 60 ಕಿ.ಮೀ ಗಾಡಿ ಓಡಿಸಿ ಮಗಳಿಗೆ ತರಬೇತಿ ಕೊಡಿಸಿರುತ್ತಾರೆ.ಅದು ಅಪ್ಪನ ತ್ಯಾಗ. ಖುದ್ದು ಸಿಯೋಲ್ ಏಷ್ಯನ್ ಗೇಮ್ಸ್ ವಾಲಿಬಾಲ್ ನಲ್ಲಿ ಭಾರತಕ್ನೆ ಕಂಚು ತಂದುಕೊಟ್ಟವರು. ಕ್ರೀಡಾಪಟುವಿನ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತವೆ. ಸಿಂಧು ಅಮ್ಮನಂತೂ ಮಗಳಿಗಾಗಿ ರೈಲ್ವೇ ನೌಕರಿಯನ್ನೇ ಬಿಟ್ಟಿರುತ್ತಾರೆ..ಅಂತ ಸಿಂಧುವನ್ನ ಬಂಗಾರದ ಹುಡುಗಿಯನ್ನಾಗಿ ಮಾಡುವಲ್ಲಿ ಪೇರೆಂಟ್ಸ್ ಕಷ್ಟಗಳು ಹೀಗಿರುತ್ತವೆ...

ಇದನ್ನೂ ಓದಿ: ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್

ಅಂತಾ ಪಿವಿ ರಮಣ ಮತ್ತು ವಿಜಯಲಕ್ಷ್ಮಿ, ಪುಲ್ಲೇಲನ‌ ಮೇಲೆ ಶುದ್ಧ ನಂಬಿಕೆ‌  ಇಟ್ಟಿರುತ್ತಾರೆ..ಅದು ಒಬ್ಬ ಪುಲ್ಲೇಲನಿಗೆ ಮಾತ್ರ ಸಾಧ್ಯವಿದ್ದ ಸಾಧನೆಯಾ..ಗೊತ್ತಿಲ್ಲ...

ಪುಲ್ಲೇಲನ ಗರಡಿಯೆಂದರೆ ಅದು ಸಿಂಹದ ಗುಹೆ....
ವಾಟ್ಸಾಪ್, ಫೇಸ್ ಬುಕ್, ಚಾಟಿಂಗು, ಚಾಟ್ಸ್ ಈಟಿಂಗು, ಚಕ್ಕುಲಿ , ಕೋಡುಬಳೆ....ಉಹ್ಞೂ .....ಚಾನ್ಸೇ ಇಲ್ಲ...ಒಂದು ಸಣ್ಣ ಅಶಿಸ್ತಿದ್ದರೂ ಅವನ‌ ಅಕಾಡೆಮಿ ಅವರ ಪಾಲಿಗಲ್ಲ. ಸೈನಾ ಚಾಂಪಿಯನ್ ಆದಾಗ ಸ್ವೀಟ್ ತಿನ್ನಲೂ ಗುರುವಿನ ಮುಖ ನೋಡುತ್ತಿದ್ದಳು...ದಟ್ ಇಸ್ ಪುಲ್ಲೇಲ...
ಕೋಕ್ ಕಂಪನಿಯೊಂದು ಕೋಟಿಗಟ್ಟಲೇ ಹಣ‌ಕೊಡುತ್ತೇನೆ ಜಾಹೀರಾತಿಗೆ ಬನ್ನಿ ಎಂದಾಗ ....ಆರೋಗ್ಯಕ್ಕೆ ಹಾನಿಯಾಗುವ ಇದನ್ನ ನಾನು ಕುಡಿಯುವುದಿಲ್ಲ...ಬೇರೆಯವರಿಗೆ ಕುಡಿಯಿರಿ ಎಂದು ನಾನು ಹೇಳಲಾರೆ ಎಂದು ಬಿಟ್ಟ ಪುಲ್ಲೇಲ...ಶಿಸ್ತು ದುಡ್ಡನ್ನ ದುಡಿಯಬಲ್ಲದು...ದುಡ್ಡು  ಶಿಸ್ತನಲ್ಲ.

ಇದನ್ನೂ ಓದಿ: ಪಿವಿ ಸಿಂಧೂ ಪಾತ್ರದಲ್ಲಿ ದೀಪಿಕಾ, ಮಿಥಾಲಿಯಾಗಿ ತಾಪ್ಸಿ ಪನ್ನು

ಇವನ ಶಿಷ್ಯರೆಲ್ಲಾ ಚಾಂಪಿಯನ್ ಗಳಾಗುತ್ತಾರಾ? ಗೊತ್ತಿಲ್ಲ.
ಕೆಲವು ಚಾಂಪಿಯನ್ ಗಳನ್ನ ಬರೆಯುತ್ತೇನೆ...ಓದಿಕೊಳ್ಳಿ
ಸೈನಾ ನೆಹ್ವಾಲ್, ಪಿವಿ ಸಿಂಧು, ಶ್ರೀಕಾಂತ್ ಕಿಡಂಬಿ, ಪಾರುಪಳ್ಳಿ ಕಶ್ಯಪ್ , ಎಚ್ ಎಸ್ ಪ್ರಣಯ್ , ಸಾಯಿ ಪ್ರಣೀತ್ , ಸಮೀರ್ ವರ್ಮ.....
ಚಾಂಪಿಯನ್ ಆಗುವುದು ದೊಡ್ಡದೇ ....ಚಾಂಪಿಯನ್‌ ಗಳನ್ನ ಮಾಡುವುದು ಅದಕ್ಕೂ ಮೇಲೆ....ಪುಲ್ಲೇಲ ....ನಿನಗೆ ಥ್ಯಾಂಕ್ಯೂ ಕಡಿಮೆಯೇ..

ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್ ಆ್ಯಂಕರ್

click me!