
ದೆಹಲಿ: ಭಾರತೀಯ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಹಚ್ಚೆಗಳ ಮೇಲಿನ ಪ್ರೀತಿ ರಹಸ್ಯವಲ್ಲ. ವರ್ಷಗಳಲ್ಲಿ, ಹಲವಾರು ವಿನ್ಯಾಸಗಳು ಅವರ ಶೈಲಿಯ ಭಾಗವಾಗಿವೆ. ಈಗ, ಹಚ್ಚೆ ಕಲಾವಿದರೊಬ್ಬರು ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ, ವಿರಾಟ್ ಅವರು ತಮ್ಮ ಹಚ್ಚೆ ಸಂಗ್ರಹಕ್ಕೆ ಮತ್ತೊಂದು ವಿನ್ಯಾಸವನ್ನು ಸೇರಿಸಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೆ ಇದಾಗಲೇ, ಕೊಹ್ಲಿ ಈ ಹಿಂದೆ ತಮ್ಮ ಜೀವನದ ವಿವಿಧ ಅಧ್ಯಾಯಗಳು, ನಂಬಿಕೆಗಳು ಮತ್ತು ಅನುಭವಗಳನ್ನು ಪ್ರತಿನಿಧಿಸಲು ಹಚ್ಚೆಗಳನ್ನು ಬಳಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ತೋಳಿನ ಮೇಲೆ ಕಮಲದ ಹೂವಿನ ಉದ್ದನೆಯ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಅಷ್ಟಕ್ಕೂ ಕೊಹ್ಲಿ ಅವರು, ಏಲಿಯನ್ಸ್ ಟ್ಯಾಟೂ ಸ್ಟುಡಿಯೋದೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದಾರೆ, ಅಲ್ಲಿ ಅವರು ತಮ್ಮ ಹಲವಾರು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ.
ಇದೀಗ ಹಚ್ಚೆ ಕಲಾವಿದರೊಬ್ಬರು ಕೊಹ್ಲಿ ಅವರ ತೋಳಿಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಇದಾಗಲೇ ಹಲವಾರು ಟ್ಯಾಟೂ ಇರುವಾಗ, ಕ್ರಿಕೆಟಿಗ ಪ್ರಸ್ತುತ ತೋಳಿನ ಮೇಲೆ ಮತ್ತೊಂದು ಹಚ್ಚೆ ಹಾಕಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂದು ಅಚ್ಚರಿ ಪಡುತ್ತಿದ್ದಾರೆ.
ಹೊಸ ಹಚ್ಚೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ, ಅವರು ಕೆಲವು ಟ್ಯಾಟೂ ಫೋಟೋಗಳನ್ನು ಶೇರ್ ಮಾಡಿದ್ದರೂ, ಅದರ ಅರ್ಥ ಏನು ಎನ್ನುವ ಬಗ್ಗೆ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಕಲಾವಿದ ಕೊಹ್ಲಿ ಅವರ ತೋಳಿನ ಮೇಲೆ ಮಾಡಿದ ಕೆಲವು ಪೋಸ್ಟ್ ಶೇರ್ ಮಾಡಿದ್ದಾರೆ. ಆದರೆ ಗುಟ್ಟು ರಿವೀಲ್ ಮಾಡಲಿಲ್ಲ. ಈ ಪೋಸ್ಟ್ನಲ್ಲಿ ಅವರು, "ವಿರಾಟ್ ಕೊಹ್ಲಿಯ ತೋಳಿನ ಮೇಲೆ ಕೆಲಸ ಮಾಡುವುದು ತುಂಬಾ ಖುಷಿ ಕೊಟ್ಟಿತು. ವಿಭಿನ್ನ ಶೈಲಿಗಳು, ವಿಭಿನ್ನ ವಿಧಾನಗಳು, ಒಂದು ಕಲಾಕೃತಿ ನಿಧಾನವಾಗಿ ರೂಪುಗೊಳ್ಳುತ್ತಿದೆ. ಐದು ದೀರ್ಘ ಅವಧಿಗಳ ನಂತರವೂ ಕೆಲಸ ಇನ್ನೂ ನಡೆಯುತ್ತಿದೆ" ಎಂದು ಬರೆದಿದ್ದಾರೆ.
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದರು. ಸರಣಿಯ ಮೂರು ಪಂದ್ಯಗಳಲ್ಲಿ ಅವರು 144 ರನ್ ಗಳಿಸಿದ್ದರು, ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಕೊಹ್ಲಿ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡ ಸೆಪ್ಟೆಂಬರ್‌ನಲ್ಲಿ ಭಾರತ ಪ್ರವಾಸ ಮಾಡಲಿದೆ. ಈ ಅವಧಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಾಗುವುದು. ಕಿಂಗ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಮತ್ತೆ ಆಟದಲ್ಲಿ ಕಾಣಿಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.