WWE ಸ್ಟಾರ್ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಹೆಲ್ತ್ ಅಪ್‌ಡೇಟ್ ಕೊಟ್ಟ ರಸ್ಲಿಂಗ್ ಪಟು

Published : Aug 30, 2026, 07:12 PM IST
The great khali

ಸಾರಾಂಶ

WWE ಮೂಲಕ ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಮಿಂಚಿದ ಭಾರತದ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಪಾಣಿಪತ್ ಬಳಿ ಅಪಘಾತಕ್ಕೀಡಾಗಿದೆ. ಟೋಲ್ ಪ್ಲಾಜಾ ಬಳಿಕ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಹರ್ಯಾಣ (ಆ.30) WWE ರಸ್ಲಿಂಗ್ ರಿಂಗ್‌ನಲ್ಲಿ ವಿದೇಶಿಯರ ನಡುವೆ ಭಾರತದ ಕೀರ್ತಿ ಪತಾಕೆ ಹಾರಿಸಿದ ಸ್ಟಾರ್ ಪಟು ದಿ ಗ್ರೇಟ್ ಖಲಿ ಅಲಿಯಾಸ್ ದಲೀಪ್ ಸಿಂಗ್ ರಾಣಾ ಕಾರು ಅಪಘಾತಕ್ಕೀಡಾಗಿದೆ. ಖಲಿ ಸಂಚರಿಸುತ್ತಿದ್ದ ಕಾರು ಹರ್ಯಾಣದ ಪಾಣಿಪತ್ ಬಳಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. ಅಪಘಾಕದ ಬಳಿಕ ಖಲಿ ಕಾರಿನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಅಪಘಾತವಾಗಿದೆ, ಆದರೆ ತಾನು ಸುರಕ್ಷಿತವಾಗಿದ್ದೇನೆ ಎಂದು ವಿಡಿಯೋ ಸಂದೇಶವನ್ನು ದಿ ಗ್ರೇಟ್ ಖಲಿ ರವಾನಿಸಿದ್ದಾರೆ.

ಟೋಲ್ ಪ್ಲಾಜಾ ಬಳಿ ನಡೆದ ಅಪಘಾತ

ಪಾಣಿಪತ್ ಟೋಲ್ ಪ್ಲಾಜಾ ಬಳಿ ಅಪಘಾತ ನಡೆದಿದೆ. ಖಲಿ ಸಂಚರಿಸುತ್ತಿದ್ದ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಣ್ಣ ಅಪಘಾತವಾಗಿದ್ದ ಕಾರಣ ಪರಿಸ್ಥಿತಿ ತಿಳಿಗೊಂಡಿದೆ. ಹೀಗಾಗಿ ದಿ ಗ್ರೇಟ್ ಖಲಿ ಈ ಕುರಿತು ಸುಮ್ಮನಾಗಿದ್ದರು. ಆದರೆ ಖಲಿ ಕಾರು ಅಪಘಾತ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಹೀಗಾಗಿ ಅಭಿಮಾನಿಗಳು, ಆಪ್ತರು ಖಲಿಗೆ ಮೆಸೇಜ್, ಫೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.

ವಿಡಿಯೋ ಮೂಲಕ ಹೆಲ್ತ್ ಅಪ್‌ಡೇಟ್ ಕೊಟ್ಟ ಖಲಿ

ಅಭಿಮಾನಿಗಳು, ಆಪ್ತರ ಫೋನ್, ಮೆಸೇಜ್ ತೀವ್ರಗೊಳ್ಳುತ್ತಿದ್ದಂತೆ ದಿ ಗ್ರೇಟ್ ಖಲಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹೆಲ್ತ್ ಅಪ್‌ಡೇಟ್ ನೀಡಿದ್ದಾರೆ. ಸಣ್ಣ ಅಪಘಾತವಾಗಿದ್ದ ಕಾರಣ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಆದರೆ ನೀವು ತೋರಿದ ಪ್ರೀತಿ, ಕಾಳಜಿಗೆ ಋಣಿಯಾಗಿದ್ದೇನೆ. ಹಲವರು ಆತಂಕ ವ್ಯಕ್ತಪಡಿಸಿ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ. ಕಾರು ಅಪಘಾತವಾಗಿದ್ದು ನಿಜ. ಆದರೆ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ನಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ ಎಂದು ದಿ ಗ್ರೇಟ್ ಖಲಿ ಹೇಳಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಅಪಘಾತದ ಬಳಿಕ ಹಲವು ದೃಶ್ಯಗಳು ವೈರಲ್ ಆಗಿತ್ತು. ಪಾಣಿಪತ್ ಅಪಘಾತದಲ್ಲಿ ಖಲಿ ಗಾಯಗೊಂಡಿದ್ದಾರೆ ಅನ್ನೋ ಮಾಹಿತಿಗಳು ಹರಿದಾಡಿತ್ತು. ಈ ರೀತಿಯ ಯಾವ ಘಟನೆಯೂ ನಡೆದಿಲ್ಲ ಎಂದು ಖಲಿ ಸ್ಪಷ್ಟಪಡಿಸಿದ್ದಾರೆ. ಖಲಿ ಸ್ವತ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಅಭಿಮಾನಿಗಳ ಆತಂಕ ದೂರವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ; ಸಿಂಗಲ್ಸ್‌ನಲ್ಲಿ ಗೆದ್ದರೆ ಸಿಗುತ್ತೆ ₹52.6 ಕೋಟಿ!
ಏಷ್ಯನ್ ಗೇಮ್ಸ್‌ಗೂ ಮುನ್ನ ಭಾರತಕ್ಕೆ ಬಿಗ್ ಶಾಕ್; ನೀರಜ್ ಚೋಪ್ರಾ ಟೂರ್ನಿಯಿಂದ ಔಟ್!