ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ ಕೊಹ್ಲಿ!

By Web Desk  |  First Published Aug 18, 2019, 3:55 PM IST

ಆಗಸ್ಟ್ 18  ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ  ಮಾಡಿದ ದಿನ. ಕೊಹ್ಲಿ ಡೆಬ್ಯೂ ಬಳಿಕ ಆಗಿದ್ದೆಲ್ಲವೂ ಇತಿಹಾಸ, ಸಚಿನ್ ತೆಂಡೂಲ್ಕಲ್, ರಿಕಿ ಪಾಂಟಿಂಗ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಪುಡಿ ಮಾಡುತ್ತಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 11 ವರ್ಷ  ಪೂರೈಸಿದ್ದಾರೆ.
 


ಆ್ಯಂಟಿಗುವಾ(ಆ.18): ಟೀಂ ಇಂಡಿಯಾ ನಾಯಕ, ವಿಶ್ವದ ನಂ.1 ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಇಂದು(ಆ.18) ವಿಶೇಷ ದಿನ. ಕಾರಣ ಇದೇ ದಿನ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗಸ್ಟ್ 18, 2008ರಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಇಂಟರ್‌ನ್ಯಾಶನಲ್ ಕ್ರಿಕೆಟ್‌ಗೆ ಡೆಬ್ಯೂ ಮಾಡಿದರು. ಇದೀಗ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ್ದಾರೆ. 

ಇದನ್ನೂ ಓದಿ: ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ರನ್; ದಿಗ್ಗಜರ ದಾಖಲೆ ಪುಡಿ ಪುಡಿ!

Latest Videos

undefined

2008ರಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೆ, 2010 ಟಿ20  ಹಾಗೂ 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕಳೆದ 11 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಹಲವು ದಿಗ್ಗಜರ ದಾಖಲೆಗಳನ್ನು ಪುಡಿ ಮಾಡಿದ್ದಾರೆ. ಈಗಾಗಲೇ 43 ಶತಕ ಸಿಡಿಸಿರುವ ಕೊಹ್ಲಿ, ಶೀಘ್ರದಲ್ಲೇ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬ್ರೇಕ್ ಮಾಡಲಿದ್ದಾರೆ.

ಇದನ್ನೂ ಓದಿ: ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್!

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಸಚಿನ್ ಪಾತ್ರರಾಗಿದ್ದಾರೆ. ಸಚಿನ್ 49 ಸೆಂಚುರಿ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್  ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ದಾಖಲೆಯೂ ಬರೆದಿದ್ದಾರೆ. 18426 ರನ್ ಸಿಡಿಸೋ ಮೂಲಕ ಸಚಿನ್ ತೆಂಡೂಲ್ಕರ್ ಭಾರತದ ಹಾಗೂ ವಿಶ್ವದ ಮೊದಲ ಬ್ಯಾಟ್ಸ್‌ಮನ್. ಸದ್ಯ ಕೊಹ್ಲಿ 11520 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವ ಕ್ರಿಕೆಟಿಗರ ಪೈಕಿ ಕೊಹ್ಲಿ, 8ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಸತತ 2 ಶತಕ ಸಿಡಿಸೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದು ದಶಕದಲ್ಲಿ 20,000 ಅಂತಾರಾಷ್ಟ್ರೀಯ ರನ್ ಸಿಡಿಸಿ ಮೊದಲ ಕ್ರೆಕಿಟಗ ಅನ್ನೋ ದಾಖಲೆ ಬರೆದಿದ್ದಾರೆ. 2012, 2017 ಹಾಗೂ 18ರಲ್ಲಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ. 206,17 ಹಾಗೂ 18ರಲ್ಲಿ ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಅವಾರ್ಡ್ ಪಡೆದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗನ ದಾಖಲೆ ಮುರಿದ ವಿರಾಟ್ ಕೊಹ್ಲಿ!

2013ರಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 77 ಪಂದ್ಯದಿಂದ 6613 ರನ್ ಸಿಡಿಸಿದ್ದಾರೆ.  ಇನ್ನು ಟಿ20 ಕ್ರಿಕೆಟ್‌ನಲ್ಲಿ 70 ಪಂದ್ಯದಿಂದ 2369 ರನ್ ದಾಖಲಿಸಿದ್ದಾರೆ. ಮೂರು ಮಾದರಿಯಲ್ಲಿ ಟೀಂ  ಇಂಡಿಯಾವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯಿಂದ ರನ್ ಮಳೆ  ಮಾತ್ರವಲ್ಲ ಮತಷ್ಟು ದಾಖಲೆಗಳು ನಿರ್ಮಾಣವಾಗಲಿ.

click me!