ವಿಜಯ್ ಹಜಾರೆ ಟ್ರೋಫಿ: ರಾಜ್ಯ​ದ ವೇಳಾ​ಪಟ್ಟಿ ಪ್ರಕಟ

Published : Sep 15, 2019, 05:15 PM IST
ವಿಜಯ್ ಹಜಾರೆ ಟ್ರೋಫಿ: ರಾಜ್ಯ​ದ ವೇಳಾ​ಪಟ್ಟಿ ಪ್ರಕಟ

ಸಾರಾಂಶ

ಮುಂಬರುವ ಸೆಪ್ಟೆಂಬರ್ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ತಂಡದ ವೇಳಾಪಟ್ಟಿ ಪ್ರಕಟಗೊಂಡಿದೆ. ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂ​ರು[ಸೆ.15]: ಸೆ.24ರಿಂದ ಆರಂಭ​ಗೊ​ಳ್ಳ​ಲಿ​ರುವ ವಿಜಯ್‌ ಹಜಾರೆ ಟ್ರೋಫಿಯ ವೇಳಾ​ಪಟ್ಟಿ ಪ್ರಕಟಗೊಂಡಿದ್ದು, ‘ಎ’ ಗುಂಪಿ​ನ​ಲ್ಲಿ​ರುವ ಕರ್ನಾ​ಟಕ ತನ್ನ ಮೊದಲ ಪಂದ್ಯ​ದಲ್ಲಿ ಹೈದ​ರಾ​ಬಾದ್‌ ವಿರುದ್ಧ ಸೆಣ​ಸ​ಲಿದೆ. 

ಕರ್ನಾಟಕ ಕ್ರಿಕೆಟ್‌ಗೆ ವಿನಯ್‌ ಕುಮಾರ್ ಗುಡ್‌ಬೈ!

ಸೆ.26ಕ್ಕೆ ಜಾರ್ಖಂಡ್‌, ಸೆ.28ಕ್ಕೆ ಛತ್ತೀಸ್‌ಗಢ, ಸೆ.29ಕ್ಕೆ ಮುಂಬೈ, ಅ.3ಕ್ಕೆ ಸೌರಾಷ್ಟ್ರ, ಅ.27ಕ್ಕೆ ಗೋವಾ, ಅ.9ಕ್ಕೆ ಆಂಧ್ರ, ಅ.13ಕ್ಕೆ ಕೇರಳ ವಿರುದ್ಧ ಆಡ​ಲಿದೆ. ಎಲ್ಲಾ ಪಂದ್ಯ​ಗಳು ಬೆಂಗ​ಳೂ​ರಿನ ವಿವಿಧ ಮೈದಾ​ನ​ಗ​ಳಲ್ಲಿ ನಡೆ​ಯ​ಲಿದೆ. ಅ.20ರಿಂದ ಕ್ವಾರ್ಟರ್‌ ಫೈನಲ್‌ ನಡೆ​ಯ​ಲಿದ್ದು, ಅ.25ಕ್ಕೆ ಫೈನಲ್‌ ನಿಗ​ದಿ​ಯಾ​ಗಿದೆ.

ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ಈ ಬಾರಿ ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ ಅವರಿಲ್ಲದೇ ರಾಜ್ಯ ತಂಡ ಕಣಕ್ಕಿಳಿಯಲಿದೆ. ವಿನಯ್ ಕುಮಾರ್ ರಾಜ್ಯ ತಂಡ ತೊರೆದು ಈ ಬಾರಿ ಪಾಂಡಿಚೆರಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಸ್ಟುವರ್ಟ್ ಬಿನ್ನಿ ನಾಗಲ್ಯಾಂಡ್ ಪರ ಆಡಲಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?