ಹೊಸ ಜರ್ಸಿಯಲ್ಲಿ ಹಾರ್ದಿಕ್ ಪಾಂಡ್ಯ ಟ್ರೋಲ್!

Published : Sep 15, 2019, 03:55 PM IST
ಹೊಸ ಜರ್ಸಿಯಲ್ಲಿ ಹಾರ್ದಿಕ್ ಪಾಂಡ್ಯ ಟ್ರೋಲ್!

ಸಾರಾಂಶ

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಪ್ರಾಯೋಜಕತ್ವದ ಟೀಂ ಇಂಡಿಯಾ  ಜರ್ಸಿ ತೊಟ್ಟು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಪಾಂಡ್ಯ ಟ್ರೋಲ್ ಮಾಡಲಾಗಿದೆ.

ಧರ್ಮಶಾಲ(ಸೆ.15): ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮರಳಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ  ಮೊದಲು ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾದ ನೂತನ ಜರ್ಸಿಯಲ್ಲಿ ಕಾಣಿಸಿಕೊಂಡ ಪಾಂಡ್ಯ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ಇದನ್ನೂ ಓದಿ: ರ‍್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!

ಸೌತ್ ಆಫ್ರಿಕಾ ಸರಣಿಯಿಂದ ಟೀಂ ಇಂಡಿಯಾ ಜರ್ಸಿ ಬದಲಾಗಿದೆ. ಇಷ್ಟು ದಿನ ಒಪ್ಪೋ ಪ್ರಾಯೋಜಕತ್ವ ಹೊಂದಿದ್ದ ಭಾರತದ  ಜರ್ಸಿ ಇದೀಗ ಬೆಂಗಳೂರು ಮೂಲದ ಬೈಜುಸ್ ಆ್ಯಪ್ ಆಧಾರಿತ ಶಿಕ್ಷಣ ಸಂಸ್ಥೆ ಪ್ರಾಯೋಜಕತ್ವ ಹೊಂದಿದೆ. ಈ ಜರ್ಸಿ ತೊಟ್ಟ ಹಾರ್ದಿಕ್ ಪಾಂಡ್ಯನನ್ನು ಟ್ರೋಲ್ ಮಾಡಲಾಗಿದೆ. ಕಾಫಿ ವಿಥ್ ಕರಣ್ ರಿಯಾಲಿಟಿ ಶೋನಲ್ಲಿ ವಿವಾದಿತ ಹೇಳಿಕೆ ನೀಡೋ ಮೂಲಕ ಟೀಕೆಗೆ ಗುರಿಯಾಗಿದ್ದ ಪಾಂಡ್ಯ, ಗುಣಮಟ್ಟದ ಶಿಕ್ಷಣ ಪಡೆದಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದೇ ಆಧಾರದಲ್ಲಿ ಇದೀಗ ಶಿಕ್ಷಣ ಪಡೆಯದ ವ್ಯಕ್ತಿ ಇದೀಗ ಶಿಕ್ಷಣ ಸಂಸ್ಥೆಯ ರಾಯಭಾರಿ ಎಂದು ಟ್ರೋಲ್ ಮಾಡಲಾಗುತ್ತಿದೆ. 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?