
ಬೆಂಗಳೂರು[ಅ.02]: 2019ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಮೊದಲ ಸೋಲಿನ ರುಚಿ ಕಂಡಿತು. ಮಂಗಳವಾರ ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಹೈದರಾಬಾದ್ ವಿರುದ್ಧ 21 ರನ್ ಸೋಲುಂಡಿತು. ಆಡಿರುವ 3 ಪಂದ್ಯಗಳಲ್ಲಿ ಕರ್ನಾಟಕ 2 ಗೆಲುವು 1 ಸೋಲಿನೊಂದಿಗೆ 8 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
4 ರನ್‌ಗೆ 2 ವಿಕೆಟ್ ಪತನ:
ಹೈದ್ರಾಬಾದ್ ನೀಡಿದ 199 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಕೇರಳ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಹುಲ್, ಈ ಪಂದ್ಯದಲ್ಲಿ ಕೇವಲ 4 ರನ್‌ಗಳಿಗೆ ಔಟಾದರು. ಕರುಣ್ ನಾಯರ್ (0) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ವೇಗಿ ಮೊಹಮದ್ ಸಿರಾಜ್ ಅವರ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಇಬ್ಬರು ಔಟಾಗಿದ್ದು ಮನೀಶ್ ಪಡೆಗೆ ದೊಡ್ಡ ಪೆಟ್ಟು ನೀಡಿತು. ಕೇವಲ 4 ರನ್ ಅಂತರದಲ್ಲಿ 2 ವಿಕೆಟ್ ಉರುಳಿದವು.
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ
3ನೇ ವಿಕೆಟ್ಗೆ ದೇವದತ್್ತ ಹಾಗೂ ನಾಯಕ ಮನೀಶ್ ಪಾಂಡೆ 85 ರನ್ ಜೊತೆಯಾಟ ಆಡಿದರು. ಆದರೆ 48 ರನ್ ಮಾಡಿದ್ದ ಮನೀಶ್ ವಿಕೆಟ್ ಸಂದೀಪ್ ಕಿತ್ತರು. ದೇವದತ್್ತ 60 ರನ್ ಗಳಿಸಿದ್ದು, ಸಂದೀಪ್ಗೆ ವಿಕೆಟ್ ಒಪ್ಪಿಸಿದರು. ಭಾರೀ ಕುಸಿತ ಕಂಡ ಕರ್ನಾಟಕ 45.2 ಓವರಲ್ಲೇ 177 ರನ್‌ಗಳಿಗೆ ಆಲೌಟಾಯಿತು.
ವಿಜಯ್ ಹಜಾರೆ ಟ್ರೋಫಿ: ಜಾರ್ಖಂಡ್ ವಿರುದ್ಧ ಕರ್ನಾಟಕ ಜಯಭೇರಿ!
ರಾಯುಡು ಆಸರೆ:
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟ್ ಮಾಡಿದ ಹೈದರಾಬಾದ್ ನಿಗದಿತ 50 ಓವರಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್ ಪೇರಿಸಿತು. ಆಯ್ಕೆಗಾರರ ಗಮನ ಸೆಳೆಯಲು ಯತ್ನಿಸುತ್ತಿರುವ ಅಂಬಾಟಿ ರಾಯುಡು ಅಜೇಯ 87 ರನ್ ಹೊಡೆದರು. ಪ್ರಸಿದ್ಧ ಕೃಷ್ಣ ಎಸೆತವೊಂದು ಬಲ ಮೊಣಕೈಗೆ ಬಡಿದಿದ್ದು, ಗಾಯಗೊಂಡ ರಾಯುಡು ಕ್ರೀಸ್ನಿಂದ ಹೊರನಡೆದರು. ಕರ್ನಾಟಕ ಪರ ಬೌಲಿಂಗ್ನಲ್ಲಿ ಅಭಿಮನ್ಯು ಮಿಥುನ್, ಪ್ರಸಿದ್ಧ ಹಾಗೂ ಮೋರೆ ತಲಾ 2 ವಿಕೆಟ್ ಕಿತ್ತರು.
ಸ್ಕೋರ್:
ಹೈದರಾಬಾದ್ 198/9 (50)
ಕರ್ನಾಟಕ 177 (45.2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.