ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

By Web Desk  |  First Published Oct 2, 2019, 9:20 AM IST

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ವಿಶಾಖಪಟ್ಟಣಂ[ಅ.02]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ರೋಹಿತ್ ಶರ್ಮಾ-ಮಯಾಂಕ್ ಅಗರ್ ವಾಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

Tap to resize

Latest Videos

ಇಲ್ಲಿನ ಡಾ. ವೈಎಸ್‌ ರಾಜಶೇಖರ ರೆಡ್ಡಿ (ಎಸಿಎ ವಿಡಿಸಿಎ) ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಹಲವು ಕಾರಣಗಳಿಗೆ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ರೆಡ್ ಬಾಲ್ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಬರೋಬ್ಬರಿ 22 ತಿಂಗಳುಗಳ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ದಿಮಾನ್ ಸಾಹ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 

ಇಂದಿನಿಂದ ಭಾರತಕ್ಕೆ ಆಫ್ರಿಕಾ ಟೆಸ್ಟ್‌

ದಾಖಲೆಯ ಮೇಲೆ ಕಣ್ಣು: ಟೀಂ ಇಂಡಿಯಾ ತವರಿನಲ್ಲಿ ಸತತ 10 ಟೆಸ್ಟ್ ಸರಣಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ ತವರಿನಲ್ಲಿ ಅತಿಹೆಚ್ಚು ಟೆಸ್ಟ್ ಸರಣಿ ಗೆದ್ದ ಮೊದಲ ತಂಡ ಎನ್ನುವ ಕೀರ್ತಿಗೆ ಪಾತ್ರರಾಗಲಿದೆ.

ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪಿವಿ ಸಿಂಧು!

ದಕ್ಷಿಣ ಆಫ್ರಿಕಾ ಕೂಡ ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವಾಗಿದ್ದು, ಮಾರ್ಕ್’ರಮ್, ತೆಂಬು ಬವುಮಾ, ಫಾಫ್ ಡು ಪ್ಲೆಸಿಸ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ಬೌಲಿಂಗ್ ನಲ್ಲಿ ರಬಾಡ, ಕೇಶವ್ ಮಹರಾಜ್, ವೆರ್ನಾನ್ ಫಿಲಾಂಡರ್ ಭಾರತಕ್ಕೆ ಸವಾಲಾಗುವ ಸಾಧ್ಯತೆಯಿದೆ.  

ತಂಡಗಳು ಹೀಗಿವೆ:

ಭಾರತ:

1st Test. India XI: R Sharma, M Agarwal, C Pujara, V Kohli, A Rahane, H Vihari, W Saha, R Jadeja, R Ashwin, I Sharma, M Shami https://t.co/67i9pBAKIR

— BCCI (@BCCI)

ದಕ್ಷಿಣ ಆಫ್ರಿಕಾ:

1st Test. South Africa XI: A Markram, D Elgar, T de Bruyn, T Bavuma, F du Plessis, Q de Kock, V Philander, S Muthusamy, K Maharaj, D Piedt, K Rabada https://t.co/67i9pBAKIR

— BCCI (@BCCI)
click me!