
ದೆಹಲಿ(ಸೆ.02): ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ನರ್ ಅಪ್ ಆಗಿರುವು ದೆಹಲಿ ಈ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ 2019-20ರ ವಿಜಯ್ ಹಜಾರೆ ಟ್ರೋಫಿಗೆ ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದೆ. 50 ಆಟಗಾರರ ಸಂಭವನೀಯ ತಂಡ ಪ್ರಕಟಿಸಿರುವ ದೆಹಲಿ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿದೆ.
ಇದನ್ನೂ ಓದಿ: ಕೊಹ್ಲಿ ನೆರವಿಲ್ಲದಿದ್ದರೆ, ನಾನೇನಾಗುತ್ತಿದ್ದೆ ಗೊತ್ತಿಲ್ಲ; ಸುಮಿತ್ ನಗಾಲ್!
ದೆಹಲಿ ಕ್ರಿಕೆಟ್ ಸಂಸ್ಛೆ ಪ್ರಕಟಿಸಿರುವ ಸಂಭಾವ್ಯ ತಂಡದಲ್ಲಿ ದೆಹಲಿಯ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶಿಖರ್ ಧವನ್, ಹಾಗೂ ಇಶಾಂತ್ ಶರ್ಮಾಗೆ ಸ್ಥಾನ ನೀಡಿದೆ. 2012-13ರಲ್ಲಿ ದೆಹಲಿ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆಗಿತ್ತು. ತಮಿಳುನಾಡು ಗರಿಷ್ಠ ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ತಮಿಳು ನಾಡು 5 ಬಾರಿ ಟ್ರೋಫಿ ಗೆದ್ದಿದೆ. ದೆಹಲಿ 3 ಬಾರಿ ಗೆದ್ದಿದ್ದರೆ, ಸದ್ಯ ಮುಂಬೈ ಹಾಲಿ ಚಾಂಪಿಯನ್ ಆಗಿದೆ.
ದೆಹಲಿ ಸಂಭಾವ್ಯ ತಂಡ ಇಲ್ಲಿದೆ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.