ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

By Web Desk  |  First Published Sep 2, 2019, 6:37 PM IST

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಸದ್ಯ ಕೆರಿಬಿಯನ್ ನಾಡಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿ ಅರೆಸ್ಟ್ ವಾರೆಂಟ್ ಟೀಂ ಇಂಡಿಯಾ ಹಾಗೂ ಬಿಸಿಸಿಗೆ ತಲೆನೋವಾಗಿ ಪರಿಣಮಿಸಿದೆ


ಕೋಲ್ಕತಾ(ಸೆ.02): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವೇಗಿ ಮೊಹಮ್ಮದ್ ಶಮಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಶಮಿ ಪತ್ನಿ ಹಸೀನ್ ಜಹಾನ್ ಹಾಗೂ ಶಮಿ ನಡುವಿನ ಜಗಳ ಶುರುವಾಗಿ ವರ್ಷಗಳ ಉರುಳಿವೆ. ಕಾನೂನು ಹೋರಾಟ ನಡೆಸುತ್ತಿರುವ ಪತ್ನಿ ಇದೀಗ ಮೇಲುಗೈ ಸಾಧಿಸಿದ್ದಾರೆ.  ಕೌಟುಂಬಿಕ ಹಿಂಸೆ ಆರೋಪದಡಿ ಮೊಹಮ್ಮದ್ ಶಮಿಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಿದೆ. ಇಷ್ಟೇ ಅಲ್ಲ ಕೋರ್ಟ್, ಶಮಿ ಸರೆಂಡರ್ ಆಗಲು ಅಥವಾ ಜಾಮೀನು ಪಡೆಯಲು 15 ದಿನಗಳ ಕಾಲಾವಕಾಶ ನೀಡಿದೆ. 

ಇದನ್ನೂ ಓದಿ: ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

Tap to resize

Latest Videos

undefined

ಮೊಹಮ್ಮದ್ ಶಮಿ ವಿರುದ್ಧ ಕಳೆದ ವರ್ಷ ಪೊಲೀಸ್ ಠಾಣಾ ಮೆಟ್ಟಿಲೇರಿದ್ದ ಪತ್ನಿ ಹಸೀನ್ ಜಹಾನ್, ಮಾನಸಿಕ ಹಿಂಸೆ, ವಂಚನೆ ಸೇರಿದಂತೆ ಹಲವು ಆರೋಪ ಮಾಡಿದ್ದರು. ಕೋಲ್ಕತಾ ಪೊಲೀಸರು ಶಮಿ ವಿರುದ್ದ 498A(ವರದಕ್ಷಿಣೆ ಕಿರುಕುಳ) ಹಾಗೂ  354A (ಲೈಂಗಿಕ ಕಿರುಕುಳ) ಕೇಸ್ ದಾಖಲಿಸಿದ್ದಾರೆ. ಪಟ್ಟು ಬಿಡದ ಪತ್ನಿ ಹಸಿನ್ ಜಹಾನ್, ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋಲ್ಕತಾ ಕೋರ್ಟ್ ಶಮಿಗೆ ಬಂಧನ ವಾರೆಂಟ್ ನೀಡಿದೆ. 15 ದಿನಗಳ ಒಳಗೆ ಸರೆಂಡರ್ ಆಗಬೇಕು ಅಥವಾ ಬೇಲ್ ಪಡೆಯಲು ಕಾಲಾವಕಾಶ ನೀಡಿದೆ.

ಇದನ್ನೂ ಓದಿ: ಬಿಸಿಸಿಐ ವಿರುದ್ಧ ಮೊಹಮ್ಮದ್ ಶಮಿ ಪತ್ನಿ ಗರಂ !

ವೆಸ್ಟ್ ಇಂಡೀಸ್ ಪ್ರವಾಸಕ್ಕೂ ತೆರಳುವು ಮುನ್ನ ಶಮಿ ಮೇಲಿನ ಕೇಸ್‌ನಿಂದಾಗಿ ಅಮೇರಿಕಾ ವೀಸಾ ನೀಡಲು ನಿರಾಕರಿಸಿತ್ತು. ತಕ್ಷಣವೆ ನೆರವಿಗೆ ಧಾವಿಸಿದ ಬಿಸಿಸಿಐ ಶಮಿಗೆ ಸಮಸ್ಯೆ ಪರಿಹರಿಸಿತ್ತು. ಇದೀಗ ಅರೆಸ್ಟ್ ವಾರೆಂಟ್ ನೀಡಿದ್ದು, ಶಮಿ ಹಾಗೂ ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

click me!