ಟೆಸ್ಟ್‌ ಡೆಬ್ಯೂ ಮಾಡಲು ಸಜ್ಜಾದ ಭಾರತದ ಅಂಪೈರ್!

By Web DeskFirst Published Sep 2, 2019, 5:36 PM IST
Highlights

ಏಕದಿನ, ಟಿ20 ಹಾಗೂ ಐಪಿಎಲ್ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡಿರುವ ಭಾರತತದ ಅಂಪೈರ್ ನಿತಿನ್ ಮೆನನ್ ಇದೀಗ ಟೆಸ್ಟ್ ಮಾದರಿಗೆ ಕಾಲಿಡುತ್ತಿದ್ದಾರೆ. 35 ವರ್ಷದ ಅಂಪೈರ್  ನಿತಿನ್ ಮೆನನ್ ಇದೀಗ ಅಪ್ಪನ ಹಾದಿಯಲ್ಲೇ ನಡೆಯುತ್ತಿದ್ದಾರೆ. 

ಮುಂಬೈ(ಸೆ.02): ಭಾರತದ ಅಂಪೈರ್ ನಿತಿನ್ ಮೆನನ್ ಇದೀಗ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಹಾಗೂ ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ನಿತಿನ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಏಕದಿನ, ಟಿ20 ಪಂದ್ಯದಲ್ಲಿ ಅಂಪೈರಿಂಗ್ ಮಾಡಿರುವ ನಿತಿನ್ ಇದೀಗ ಟೆಸ್ಟ್ ಮಾದರಿಗೂ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: 3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

35 ವರ್ಷದ  ನಿತಿನ್ ಮೆನನ್ 22 ಅಂತಾರಾಷ್ಟ್ರೀಯ ಏಕದಿನ, 9 ಟಿ20,  57 ಪ್ರಥಮ ದರ್ಜೆ ಪಂದ್ಯ  ಹಾಗೂ 40 ಐಪಿಎಲ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2006ರಲ್ಲಿ ಬಿಸಿಸಿಐನ ಅಂಪೈರ್ ಪರೀಕ್ಷೆ ಪಾಸಾದ ನಿತಿನ್, 2007-08 ರಲ್ಲಿ ಅಂಪೈರ್ ವೃತ್ತಿ ಆರಂಭಿಸಿದರು.

ಇದನ್ನೂ ಓದಿ: 8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

ಮಧ್ಯಪ್ರದೇಶದ  U-16, U-19, U-23 ತಂಡವನ್ನು ಪ್ರತಿನಿದಿಸಿದ್ದ ನಿತಿನ್ ಮೆನನ್ ಬಳಿಕ ಅಂಪೈರಿಂಗ್‌ನತ್ತ ಒಲವು ತೋರಿದರು.  ನಿತಿನ್ ತಂದೆ ನರೇಂದ್ರ ಮೆನನ್ ಕೂಡ ಅಂತಾರಾಷ್ಟ್ರೀಯ ಅಂಪೈರ್ ಆಗಿದ್ದರು. ನರೇಂದ್ರ ಮೆನನ್ ನಿವೃತ್ತಿ ಹೇಳಿದ ಬೆನ್ನಲ್ಲೇ ನಿತಿನ್ ಮೆನನ್ ಅಂತಾರಾಷ್ಟ್ರೀಯ ಅಂಪೈರಿಂಗ್ ಕರಿಯರ್ ಆರಂಭಿಸಿದರು.

click me!