ಯುಎಸ್ ಓಪನ್: ಪ್ರಿ ಕ್ವಾರ್ಟರ್‌ಗೆ ಜೋಕೋ, ಇಗಾ ಲಗ್ಗೆ

By Kannadaprabha NewsFirst Published Sep 3, 2023, 8:20 AM IST
Highlights

ಬುಧವಾರ ರಾತ್ರಿ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಸರ್ಬಿಯಾದ ಜೋಕೋ, ತಮ್ಮ ದೇಶದವರೇ ಆದ ಲಾಸ್ಲೊ ಜೆರೆ ವಿರುದ್ಧ 4-6, 4-6, 6-1, 6-1, 6-3 ಸೆಟ್‌ಗಳಲ್ಲಿ ರೋಚಕ ಜಯ ಸಾಧಿಸಿದರು. ಮೊದಲೆರಡು ಸೆಟ್‌ ಸೋತರೂ ಬಳಿಕ ಪುಟಿದೆದ್ದ ವಿಶ್ವ ನಂ.1 ಆಟಗಾರ ಜೋಕೋ, ಅಂತಿಮ 16ರ ಘಟ್ಟ ಪ್ರವೇಶಿಸಲು ಯಶಸ್ವಿಯಾದರು.

ನ್ಯೂಯಾರ್ಕ್‌(): 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ರಾತ್ರಿ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಸರ್ಬಿಯಾದ ಜೋಕೋ, ತಮ್ಮ ದೇಶದವರೇ ಆದ ಲಾಸ್ಲೊ ಜೆರೆ ವಿರುದ್ಧ 4-6, 4-6, 6-1, 6-1, 6-3 ಸೆಟ್‌ಗಳಲ್ಲಿ ರೋಚಕ ಜಯ ಸಾಧಿಸಿದರು. ಮೊದಲೆರಡು ಸೆಟ್‌ ಸೋತರೂ ಬಳಿಕ ಪುಟಿದೆದ್ದ ವಿಶ್ವ ನಂ.1 ಆಟಗಾರ ಜೋಕೋ, ಅಂತಿಮ 16ರ ಘಟ್ಟ ಪ್ರವೇಶಿಸಲು ಯಶಸ್ವಿಯಾದರು. ಮುಂದಿನ ಸುತ್ತಿನಲ್ಲಿ ಅವರಿಗೆ ಕ್ರೊವೇಷಿಯಾದ ಬೊರ್ನಾ ಗೊಜೊ ಸವಾಲು ಎದುರಾಗಲಿದೆ.

ಏಷ್ಯಾಕಪ್ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟಿಗರ ಶೈಕ್ಷಣಿಕ ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಇಗಾಗೆ ಜಯ: ಇದೇ ವೇಳೆ ವಿಶ್ವ ನಂ.1, ಪೋಲೆಂಡ್‌ನ 4 ಗ್ರ್ಯಾನ್‌ಸ್ಲಾಂಗಳ ಒಡತಿ ಸ್ವಿಯಾಟೆಕ್‌ ಸ್ಲೊವೇನಿಯಾದ ಕಾಜಾ ಜುಬಾನ್‌ರನ್ನು 6-0, 6-1 ಸೆಟ್‌ಗಳಲ್ಲಿ ಸುಲಭವಾಗಿ ಸೋಲಿಸಿದರು. 2023ರ ಫ್ರೆಂಚ್‌ ಓಪನ್‌ ರನ್ನರ್‌-ಅಪ್‌, ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಅವರು ಅಮೆರಿಕದ ಟೇಲರ್‌ ಟವ್ನ್‌ಸೆಂಡ್‌ ವಿರುದ್ಧ 7-6(7/0), 6-3 ಸೆಟ್‌ಗಳಲ್ಲಿ ಜಯಿಸಿದರು. 6ನೇ ಶ್ರೇಯಾಂಕಿತೆ, ಅಮೆರಿಕದ ಕೊಕೊ ಗಾಫ್‌ ಕೂಡಾ 4ನೇ ಸುತ್ತು ಪ್ರವೇಶಿಸಿದರು. ಆದರೆ 2022ರ ವಿಂಬಲ್ಡನ್‌ ಚಾಂಪಿಯನ್‌ ಎಲೆನಾ ರಬೈಕೆನಾ ಸೋತು ಅಭಿಯಾನ ಕೊನೆಗೊಳಿಸಿದರು. ರೊಮೇನಿಯಾದ 33 ವರ್ಷದ ಸೊರನಾ ಸಿರ್ಟ್ಸಿಯಾ ವಿರುದ್ಧ 3-6, 7-6, 4-6ರಲ್ಲಿ ಪರಾಭವಗೊಂಡರು.

ಬೋಪಣ್ಣ 3ನೇ ಸುತ್ತಿಗೆ

ಭಾರತದ 43 ವರ್ಷದ ತಾರಾ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿಗೇರಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 6ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ ರಷ್ಯಾದ ರೋಮನ್ ಸಫ್ಯುಲಿನ್‌-ಕಜಕಸ್ತಾನದ ಆ್ಯಂಡ್ರೆ ಗೊಲುಬೆವ್‌ ವಿರುದ್ಧ 6-3, 6-3 ಸೆಟ್‌ಗಳಲ್ಲಿ ಜಯಗಳಿಸಿತು.

ಡೈಮಂಡ್‌ ಲೀಗ್‌: ನೀರಜ್‌ ಸ್ವಿಜರ್‌ಲೆಂಡಲ್ಲಿ ಅಭ್ಯಾಸ

ನವದೆಹಲಿ: ಸೆ.16, 17ರಂದು ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್ಸ್‌ ಸಿದ್ಧತೆಗಾಗಿ ನೀರಜ್‌ ಚೋಪ್ರಾ ಸ್ವಿಜರ್‌ಲೆಂಡ್‌ನಲ್ಲಿ 12 ದಿನಗಳ ಅಭ್ಯಾಸ ನಡೆಸಲಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯ ನೀರಜ್‌ಗೆ ಪ್ರವಾಸ ಹಾಗೂ ಸಿದ್ಧತೆಯ ವೆಚ್ಚ ಭರಿಸುವುದಾಗಿ ತಿಳಿಸಿದೆ. ಡೈಮಂಡ್‌ ಲೀಗ್‌ ಫೈನಲ್‌ ಬಳಿಕ ನೀರಜ್‌ ಏಷ್ಯಾಡ್‌ನಲ್ಲಿ ಸ್ಪರ್ಧಿಸಲು ಚೀನಾಕ್ಕೆ ಪ್ರಯಾಣಿಸಲಿದ್ದಾರೆ.

US Open 2023: ಕಾರ್ಲೊಸ್ ಆಲ್ಕರಜ್‌ 3ನೇ ಸುತ್ತಿಗೆ ಲಗ್ಗೆ

ಡೈಮಂಡ್‌ ಲೀಗ್‌ ಫೈನಲ್ಸ್‌ಗೆ ಅರ್ಹತೆ ಪಡೆದ ಅವಿನಾಶ್‌

ಝೀಮನ್‌(ಚೀನಾ): ಭಾರತದ ತಾರಾ ಸ್ಟೀಪಲ್‌ಚೇಸ್‌ ಪಟು ಅವಿನಾಶ್‌ ಸಾಬ್ಳೆ ಡೈಮಂಡ್‌ ಲೀಗ್‌ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಶನಿವಾರ ಸಾಬ್ಳೆ ಝೀಮನ್‌ ಡೈಮಂಡ್‌ ಲೀಗ್‌ ಕೂಟದಲ್ಲಿ ಪುರುಷರ 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ 8 ನಿಮಿಷ 16.27 ಸೆಕೆಂಡ್‌ಗಳಲ್ಲಿ ಕ್ರಮಿಸಿ 5ನೇ ಸ್ಥಾನ ಪಡೆದರು. ಇದರೊಂದಿಗೆ 8 ಕೂಟಗಳಲ್ಲಿ 11 ಅಂಕ ಸಂಪಾದಿಸಿ ಫೈನಲ್‌ಗೇರಿದರು. ಈಗಾಗಲೇ ಭಾರತದಿಂದ ಜಾವೆಲಿನ್‌ನಲ್ಲಿ ನೀರಜ್‌ ಚೋಪ್ರಾ, ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್‌ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದರು.

ಟ್ರಿಪಲ್‌ ಜಂಪ್‌ನಲ್ಲಿ ನಿರಾಸೆ: ಇದೇ ವೇಳೆ ಟ್ರಿಪಲ್‌ಜಂಪ್‌ನಲ್ಲಿ ಭಾರತದ ಪ್ರವೀಣ್‌ ಚಿತ್ರವೇಲು ಹಾಗೂ ಅಬ್ದುಲ್ಲಾ ಅಬೂಬಕರ್‌ ನಿರಾಸೆ ಅನುಭವಿಸಿದರು. ಪ್ರವೀಣ್ 16.42 ಮೀ. ದೂರಕ್ಕೆ ಜಿಗಿದು 5ನೇ ಸ್ಥಾನ ಪಡೆದರೆ, ಅಬ್ದುಲ್ಲಾ 16.25 ಮೀ.ನೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

click me!