ಯುಎಸ್ ಓಪನ್ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ರಾಫೆಲ್ ನಡಾಲ್
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ರಾಫೆಲ್ ನಡಾಲ್‌ಗೆ ಸೋಲು
ಅಮೆರಿಕದ ಫ್ರಾನ್ಸೆಸ್ ಥಿಯಾಪೊ ವಿರುದ್ದ ಸೋಲುಂಡ ನಡಾಲ್
ನ್ಯೂಜಿಲೆಂಡ್(ಸೆ.06): 2022ನೇ ಸಾಲಿನ ಯುಎಸ್ ಓಪನ್ ಟೆನಿಸ್ ಟೂರ್ನಿಯ ಅತಿದೊಡ್ಡ ಆಘಾತಕಾರಿ ಫಲಿತಾಂಶ ಹೊರಬಿದ್ದಿದ್ದು, ಸ್ಪೇನ್ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ನಾಲ್ಕರ ಘಟ್ಟದಲ್ಲೇ ಸೋಲುಂಡು ಹೊರಬಿದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಎನಿಸಿಕೊಂಡಿರುವ ರಾಫೆಲ್ ನಡಾಲ್, ಅಮೆರಿಕದ ಫ್ರಾನ್ಸೆಸ್ ಥಿಯಾಪೊ ಎದುರು 6-4, 4-6, 6-4,6-3 ಸೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ನಡಾಲ್ 2022ರಲ್ಲಿ ಮೊದಲ ಸೋಲು ಅನುಭವಿಸಿದರು.
ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ ಸತತ 16 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ರಾಫೆಲ್ ನಡಾಲ್ ಅವರ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಕಿಬ್ಬೊಟ್ಟೆ ನೋವಿನ ಸಮಸ್ಯೆಯಿಂದಾಗಿ ಹೊರಬಿದ್ದಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಫೆಲ್ ನಡಾಲ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನನ್ನುಭವಿಸಿದ್ದಾರೆ.
24 ವರ್ಷದ ಅಮೆರಿಕದ ಫ್ರಾನ್ಸೆಸ್ ಥಿಯಾಪೊ ಬರೋಬ್ಬರಿ 3 ಗಂಟೆ 31 ನಿಮಿಷಗಳ ಕಾಲ ಕಾದಾಟ ನಡೆಸುವ ಮೂಲಕ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರಿಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. ಈ ಮೂಲಕ 2018ರ ಬಳಿಕ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮೆರಿಕದ ಟೆನಿಸಿಗ ಎನ್ನುವ ಹಿರಿಮೆಗೆ ಫ್ರಾನ್ಸೆಸ್ ಥಿಯಾಪೊ ಪಾತ್ರರಾಗಿದ್ದಾರೆ.
FRANCES TIAFOE HAS DONE IT pic.twitter.com/V0dnN5eXHz
— US Open Tennis (@usopen)ಕಳೆದ ಜೂನ್‌ನಲ್ಲಿ ನಡೆದ ಫ್ರೆಂಚ್ ಓಪನ್ ವೇಳೆಯಲ್ಲಿಯೇ ಸಾಕಷ್ಟು ಫಿಟ್ನೆಸ್ ಸಮಸ್ಯೆಯನ್ನು ನಡಾಲ್ ಎದುರಿಸುತ್ತಿದ್ದರು, ಇದರ ಹೊರತಾಗಿಯೂ ನೋವು ನಿವಾರಕ ಇಂಜೆಕ್ಷನ್ ಪಡೆದು 14ನೇ ಫ್ರೆಂಚ್ ಓಪನ್ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
US Open 2022: ವಿಶ್ವ ನಂ.1 ಡ್ಯಾನಿಲ್ ಮೆಡ್ವೆಡೆವ್‌ಗೆ ಸೋಲುಣಿಸಿದ ನಿಕ್ ಕಿರಿಯೋಸ್
ಇದೀಗ ಅಮೆರಿಕದ ಫ್ರಾನ್ಸೆಸ್ ಥಿಯಾಪೊ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ಎದುರಿಸಲಿದ್ದಾರೆ. ಇದೀಗ ಯುಎಸ್ ಓಪನ್ ಪುರುಷ ಸಿಂಗಲ್ಸ್‌ನಲ್ಲಿ ಮತ್ತೊಮ್ಮೆ ಹೊಸ ಚಾಂಪಿಯನ್ ಉದಯವಾಗುವುದು ಖಚಿತವಾಗಿದೆ. 2020ರ ಯುಎಸ್ ಓಪನ್ ಚಾಂಪಿಯನ್ ಪಟ್ಟ ಡೋಮಿನಿಕ್ ಥಿಮ್ ಪಾಲಾಗಿತ್ತು. ಇನ್ನು 2021ರಲ್ಲಿ ಡ್ಯಾನಿಲ್ ಮೆಡ್ವೆಡೆವ್ ಟ್ರೋಫಿಗೆ ಮುತ್ತಿಕ್ಕಿದ್ದರು.
The has entered a new era. pic.twitter.com/nEebZAEA1e
— US Open Tennis (@usopen)