ಪಾಕಿಸ್ತಾನ ಎದುರು ರಿಷಭ್ ಪಂತ್ ಫೇಲ್, ಊರ್ವಶಿ ರೌಟೇಲಾ ಫುಲ್‌ ಟ್ರೋಲ್‌..!

Published : Sep 06, 2022, 12:21 PM IST
ಪಾಕಿಸ್ತಾನ ಎದುರು ರಿಷಭ್ ಪಂತ್ ಫೇಲ್, ಊರ್ವಶಿ ರೌಟೇಲಾ ಫುಲ್‌ ಟ್ರೋಲ್‌..!

ಸಾರಾಂಶ

* ಪಾಕಿಸ್ತಾನ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಿಷಭ್ ಪಂತ್ * ರಿಷಭ್ ಪಂತ್ ಫೇಲ್ ಆಗಿದ್ದಕ್ಕೆ ಊರ್ವಶಿ ರೌಟೇಲಾ ಟ್ರೋಲ್ * ಪಾಕಿಸ್ತಾನ ಎದುರು ಸೋಲು ಕಂಡಿದ್ದ ಟೀಂ ಇಂಡಿಯಾ

ದುಬೈ(ಸೆ.06): ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ರೋಚಕ ಸೋಲು ಅನುಭವಿಸಿದೆ. ಪಂದ್ಯ ಮುಗಿದು ಎರಡು ದಿನ ಕಳೆಯುತ್ತಾ ಬಂದರೂ, ಪಂದ್ಯದ ಕುರಿತಾದ ಮಾತುಕತೆಗಳು ಮಾತ್ರ ನಿಂತಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ನಟಿ ಹಾಗೂ ರೂಪದರ್ಶಿ ಊರ್ವಶಿ ರೌಟೇಲಾ ದುಬೈ ಅಂತಾರಾಷ್ಟ್ರೀಯ ಮೈದಾನಕ್ಕೆ ಆಗಮಿಸಿದ್ದರು. ಪಾಕ್ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ನೆಟ್ಟಿಗರು ಊರ್ವಶಿ ರೌಟೇಲಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ಊರ್ವಶಿ ರೌಟೇಲಾ ತಾವು ದುಬೈನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಊರ್ವಶಿ ರೌಟೇಲಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ರಿಷಭ್ ಪಂತ್ ಹಾಗೂ ಊರ್ವಶಿ ರೌಟೇಲಾ ನಡುವೆ ಸಾಕಷ್ಟು ಮುಸುಕಿನ ಗುದ್ದಾಟಗಳು ನಡೆದಿದ್ದವು.

ಊರ್ವಶಿ ರೌಟೇಲಾ, ಖಾಸಗಿ ಚಾನೆಲ್‌ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ಕ್ರಿಕೆಟಿಗನೊಬ್ಬ ನನ್ನ ಭೇಟಿಯಾಗಲು ಸಾಕಷ್ಟು ಹಾತೊರೆದಿದ್ದರು. ನನ್ನ ಭೇಟಿಯಾಗಲು ಹೋಟೆಲ್‌ ಲಾಬಿಯಲ್ಲಿ ಗಂಟೆಗಟ್ಟಲೇ ಕಾದಿದ್ದರು, ಹಾಗೂ 16 ರಿಂದ 17 ಬಾರಿ ಮಿಸ್‌ ಕಾಲ್ ಮಾಡಿದ್ದರು ಎಂದು ಹೇಳಿದ್ದರು. ಆ ಆಟಗಾರನ ಪೂರ್ಣ ಹೆಸರನ್ನು ಊರ್ವಶಿ ಹೇಳಿರಲಿಲ್ಲ, ಆದರೆ ಚುಟುಕಾಗಿ RP ಎಂದಷ್ಟೇ ಹೇಳಿದ್ದರು. 

ಈ ಕುರಿತಂತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ರಿಷಭ್ ಪಂತ್, ಪ್ರಚಾರಕ್ಕಾಗಿ ಜನ ಏನೆಲ್ಲಾ ಮಾಡುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಜನ ಪುಕ್ಕಟೆ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುತ್ತಾರೆ. ಹೆಸರು ಹಾಗೂ ಖ್ಯಾತಿ ಗಳಿಸಲು ಜನ ಈ ರೀತಿ ಮಾಡುವುದನ್ನು ನೋಡಿದರೆ ಬೇಸರ ಎನಿಸುತ್ತದೆ. ಅವರಿಗೆ ದೇವರು ಒಳ್ಳೆಯದ್ದನ್ನು ಮಾಡಲಿ ಎಂದು ಪಂತ್ ಬರೆದುಕೊಂಡಿದ್ದರು. 

ಇಷ್ಟಕ್ಕೆ ಸುಮ್ಮನಾಗದ ಊರ್ವಶಿ ರೌಟೇಲಾ, ತಮ್ಮ ಬ್ಯಾಟ್​ ಬಾಲ್​ ಅಷ್ಟೇ ಆಡಬೇಕು. ನಾನೇನು ಮುನ್ನಿ ಅಲ್ಲ. ನಿನ್ನಂತಹ ಚಿಕ್ಕ ಹುಡುಗನೊಂದಿಗೆ ಪ್ರೀತಿ ಪ್ರೇಮದಲ್ಲಿ ಬಿದ್ದು  ಹಾಳಾಗಲು. ರಕ್ಷಾ ಬಂಧನದ ಶುಭಾಶಯಗಳು ಆರ್​ಪಿ ತಮ್ಮ. ಒಬ್ಬಂಟಿ ಹುಡುಗಿಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಪಂತ್‌ಗೆ ತಿರುಗೇಟು ನೀಡಿದ್ದರು.

Urvashi-Rishabh Controversy: ಮತ್ತೆ ಊರ್ವಶಿ ರೌಟೇಲಾ ಕಾಲೆಳೆದ ಟೀಂ ಇಂಡಿಯಾ ಕ್ರಿಕೆಟಿಗ ಪಂತ್..!

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ರಿಷಭ್ ಪಂತ್, ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಈ ಪಂದ್ಯವನ್ನು ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. 

ಊರ್ವಶಿ ರೌಟೇಲಾ ಅವರನ್ನು ಟ್ರೋಲ್ ಮಾಡಿದ ಹಲವು ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!