
ಹೊಡಿಬಡಿ ಆಟದ ಟಿ20 ಕ್ರಿಕೆಟ್’ನಲ್ಲಿ ಒಂಟಿ ರನ್ ಗಳಿಸುವುದಕ್ಕಿಂತ ಬ್ಯಾಟ್ಸ್’ಮನ್’ಗಳು ಬೌಂಡರಿ ಸಿಕ್ಸರ್’ಗಳ ಮೂಲಕವೇ ಅತಿ ಹೆಚ್ಚು ರನ್ ಗಳಿಸಲು ಮುಂದಾಗುತ್ತಾರೆ. ಅದರಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್’ಗೆ ಹೆಸರಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಧೋನಿ, ರೈನಾ ಅವರಂತಹ ಆಟಗಾರರು ಅನಾಯಾಸವಾಗಿ ಚೆಂಡನ್ನು ಮೈದಾನದಾಚೆಗೆ ಕಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ಭಾರತದ ಚುಟುಕು ಕ್ರಿಕೆಟ್ ಹಬ್ಬವಾದ ಇಂಡಿಯನ್ ಪ್ರೀಮಿಯರ್ ಲೀಗ್[ಐಪಿಎಲ್]ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದು (292) ಇನ್ನು ಕೇವಲ 8 ಸಿಕ್ಸರ್ ಬಾರಿಸಿದರೆ ಐಪಿಎಲ್ ಟೂರ್ನಿಯಲ್ಲಿ 300 ಸಿಕ್ಸರ್ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಿದ್ದಾರೆ. ಇನ್ನು ತಲಾ 186 ಸಿಕ್ಸರ್ ಸಿಡಿಸಿರುವ ಎಬಿ ಡಿವಿಲಿಯರ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಈ ಇಬ್ಬರಲ್ಲಿ ಯಾರು ಮೊದಲು 200 ಸಿಕ್ಸರ್ ಕ್ಲಬ್ ಸೇರಲಿದ್ದಾರೆ ಎನ್ನುವ ಕುತೂಹಲಕ್ಕೆ 12ನೇ ಆವೃತ್ತಿಯ ಐಪಿಎಲ್ ಉತ್ತರ ನೀಡಲಿದೆ. ಇನ್ನು ಈ ಇಬ್ಬರು ಕ್ರಿಕೆಟಿಗರಿಗಿಂತ 1&2 ಸಿಕ್ಸರ್’ಗಳಲ್ಲಿ ಹಿಂದಿರುವ ಸ್ಫೋಟಕ ಬ್ಯಾಟ್ಸ್’ಮನ್’ಗಳಾದ ಸುರೇಶ್ ರೈನಾ ಹಾಗೂ ರೋಹಿತ್ ಕೂಡಾ 200 ಸಿಕ್ಸರ್ ಸಿಡಿಸಿದವರ ಕ್ಲಬ್ ಸೇರುವ ನಿರೀಕ್ಷೆಯಲ್ಲಿದ್ದಾರೆ.
IPL ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ಮುಂದಿಡುತ್ತಿದೆ.
1. ಕ್ರಿಸ್ ಗೇಲ್: 292 ಸಿಕ್ಸರ್, 112 ಪಂದ್ಯ
2 ಎಬಿ ಡಿವಿಲಿಯರ್ಸ್: 186 ಸಿಕ್ಸರ್, 141 ಪಂದ್ಯ
3. ಎಂ.ಎಸ್ ಧೋನಿ: 186 ಸಿಕ್ಸರ್, 175 ಪಂದ್ಯ
4. ಸುರೇಶ್ ರೈನಾ: ಸಿಕ್ಸರ್ 185, ಪಂದ್ಯ 176
5. ರೋಹಿತ್ ಶರ್ಮಾ: ಸಿಕ್ಸರ್ 184, ಪಂದ್ಯ 173
6. ವಿರಾಟ್ ಕೊಹ್ಲಿ: ಸಿಕ್ಸರ್ 178, ಪಂದ್ಯ 163
7. ಡೇವಿಡ್ ವಾರ್ನರ್: ಸಿಕ್ಸರ್ 160, ಪಂದ್ಯ 114
8 ಶೇನ್ ವಾಟ್ಸನ್: ಸಿಕ್ಸರ್ 157, ಪಂದ್ಯ 117
9. ಯೂಸುಫ್ ಪಠಾಣ್: ಸಿಕ್ಸರ್ 157, ಪಂದ್ಯ 164
10. ಕಿರಾನ್ ಪೊಲ್ಲಾರ್ಡ್: ಸಿಕ್ಸರ್ 154, ಪಂದ್ಯ 132
ಇದನ್ನು ಓದಿ: IPL ಟಾಪ್ 10 ಗರಿಷ್ಠ ರನ್ ಸರದಾರರಿವರು
ಇದನ್ನು ಓದಿ: ಐಪಿಎಲ್ 2019: ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.