ವಿಶೇಷ ಒಲಿಂಪಿಕ್ಸ್: 362 ಪದಕ ಬಾಚಿಕೊಂಡ ಭಾರತ

Published : Mar 21, 2019, 12:44 PM IST
ವಿಶೇಷ ಒಲಿಂಪಿಕ್ಸ್: 362 ಪದಕ ಬಾಚಿಕೊಂಡ ಭಾರತ

ಸಾರಾಂಶ

ವರ್ಷದ ಅತಿದೊಡ್ಡ ಕ್ರೀಡಾ ಜಾತ್ರೆಯಾದ ವಿಶೇಷ ಒಲಿಂಪಿಕ್ಸ್’ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದ್ದು, 350ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವಲ್ಲಿ ಅಥ್ಲೀಟ್’ಗಳು ಯಶಸ್ವಿಯಾಗಿದ್ದಾರೆ. 

ಅಬುದಾಬಿ[ಮಾ.21]: ವಿಶೇಷ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2019ರ ಟೂರ್ನಿಯಲ್ಲಿ ಭಾರತ 350ಕ್ಕೂ ಹೆಚ್ಚು ಪದಕಗಳನ್ನು ಜಯಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ. 

ಯುಎಇ ದೇಶದ ಅಬುದಾಬಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ನಿರ್ಮಿಸಿದ್ದು, ಇದುವರೆಗೆ ಭಾರತೀಯ ಕ್ರೀಡಾಪಟುಗಳು 85 ಚಿನ್ನ, 153 ಬೆಳ್ಳಿ ಹಾಗೂ 124 ಕಂಚಿನ ಪದಕಗಳು ಸೇರಿದಂತೆ ಒಟ್ಟು 362 ಪದಕಗಳು ಗೆದ್ದುಕೊಂಡಿದ್ದಾರೆ.

ಗುರುವಾರ ಸಂಜೆ ಕ್ರೀಡಾಕೂಟಕ್ಕೆ ತೆರೆಬೀಳಲಿದ್ದು, ಝಾಯೆದ್ ಸ್ಪೋರ್ಟ್ ಮೈದಾನದಲ್ಲಿ ವಿಶ್ವದ ಪ್ರಸಿದ್ಧ ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ. ವರ್ಷದ ಅತಿದೊಡ್ಡ ಕ್ರೀಡಾಜಾತ್ರೆಯಲ್ಲಿ ಅಥ್ಲೀಟ್’ಗಳು ಹಾಗೂ ಕೋಚ್’ಗಳು ಪರೇಡ್’ನಲ್ಲಿ ಪಾಲ್ಗೊಳ್ಳಲಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!