‘ಮೊಹಮದ್ ಅಲಿ ಬಾಕ್ಸಿಂಗ್ ಮಾಡುವುದನ್ನು ಟೀವಿಯಲ್ಲಿ ನೋಡಿ, ಕ್ರೀಡೆಯತ್ತ ನಾನು ಆಕರ್ಷಿತಳಾದೆ. ಒಬ್ಬ ಪುರುಷ ಈ ರೀತಿ ಬಾಕ್ಸಿಂಗ್ ಮಾಡಬಹುದಾದರೆ ಒಬ್ಬ ಮಹಿಳೆಯಿಂದ ಏಕೆ ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಜಾಕಿ ಚಾನ್‌ರ ಹಲವು ಚಿತ್ರಗಳನ್ನು ನೋಡಿ ಹೇಗೆ ಹೋರಾಡಬೇಕು ಎನ್ನುವುದನ್ನು ಕಲಿತುಕೊಂಡೆ ಎಂದು ಮೇರಿ ಹೇಳಿದ್ದಾರೆ.
ಪಣಜಿ[ಏ.14]: 6 ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಭಾರತದ ಮೇರಿ ಕೋಮ್, ತಾವು ಬಾಕ್ಸಿಂಗ್ ಆರಂಭಿಸಲು ದಿಗ್ಗಜ ಮೊಹಮದ್ ಅಲಿ ಕಾರಣ ಎಂದಿದ್ದಾರೆ.
ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1
undefined
ಶನಿವಾರ ಇಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇರಿ, ‘ಮೊಹಮದ್ ಅಲಿ ಬಾಕ್ಸಿಂಗ್ ಮಾಡುವುದನ್ನು ಟೀವಿಯಲ್ಲಿ ನೋಡಿ, ಕ್ರೀಡೆಯತ್ತ ನಾನು ಆಕರ್ಷಿತಳಾದೆ. ಒಬ್ಬ ಪುರುಷ ಈ ರೀತಿ ಬಾಕ್ಸಿಂಗ್ ಮಾಡಬಹುದಾದರೆ ಒಬ್ಬ ಮಹಿಳೆಯಿಂದ ಏಕೆ ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಜಾಕಿ ಚಾನ್‌ರ ಹಲವು ಚಿತ್ರಗಳನ್ನು ನೋಡಿ ಹೇಗೆ ಹೋರಾಡಬೇಕು ಎನ್ನುವುದನ್ನು ಕಲಿತುಕೊಂಡೆ. ನಾನು ಸಾಕಷ್ಟುಬಾಲಿವುಡ್ ಚಿತ್ರಗಳನ್ನೂ ನೋಡುತ್ತೇನೆ. ಅಕ್ಷಯ್ ಕುಮಾರ್‌ರ ಸಾಹಸ ನನ್ನಲ್ಲಿ ಸ್ಫೂರ್ತಿ ತುಂಬಿತ್ತು’ ಎಂದು ಹೇಳಿದ್ದಾರೆ.
ಮೇರಿ ಕೋಮ್’ಗೆ ಒಲಿದ ಗೌರವ ಡಾಕ್ಟರೇಟ್
ಇದೇ ವೇಳೆ 2020ರ ಟೋಕಿಯೋ ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ಗೆಲ್ಲಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. 2012ರ ಲಂಡನ್ ಒಲಿಂಪಿಕ್ಸ್’ನಲ್ಲಿ ಮೇರಿ ಕೋಮ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...