
ಮೊಹಾಲಿ(ಏ.14): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವಿನ ದಡ ಸೇರಿದೆ. ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯದಲ್ಲಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸೋ ಮೂಲಕ RCB ಸತತ 6 ಪಂದ್ಯದ ಸೋಲಿನ ಬಳಿಕ, ಮೊದಲ ಗೆಲುವು ದಾಖಲಿಸಿದೆ. ಆದರೆ ಗೆಲುವಿನ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಸಂಕಷ್ಠ ಎದುರಾಗಿದೆ.
ಇದನ್ನೂ ಓದಿ: ಮೊಹಾಲಿಯಲ್ಲಿ ಅಬ್ಬರಿಸಿದ ಕೊಹ್ಲಿ-ಎಬಿಡಿ- ಕೊನೆಗೂ ಗೆಲುವು ಕಂಡ RCB
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮಂದಗತಿಯ ಬೌಲಿಂಗ್(Slow Over-Rate) ಮಾಡಿದ ಕಾರಣಕ್ಕೆ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಿಗಧಿತ ಸಮಯದಲ್ಲಿ ಓವರ್ ಮುಗಿಸದ ಕಾರಣ ಕ್ರಿಕೆಟ್ ನಿಯಮದ ಪ್ರಕಾರ ದಂಡ ವಿದಿಸಲಾಗಿದೆ.
ಇದನ್ನೂ ಓದಿ: ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್..!
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ RCB ಗೆಲುವಿಗೆ 174 ರನ್ ಟಾರ್ಗೆಟ್ ಪಡೆದಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಆದರೆ ಗೆದ್ದ ಬೆನ್ನಲ್ಲೇ ಕೊಹ್ಲಿಗೆ ಫೈನ್ ಹಾಕಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.