ಅಪ್ಪ-ತಂಗಿ ಕಾಂಗ್ರೆಸ್, ಪತ್ನಿ ಬಿಜೆಪಿ- ಇಕ್ಕಟ್ಟಿನಲ್ಲಿ ರವೀಂದ್ರ ಜಡೇಜಾ!

Published : Apr 14, 2019, 05:16 PM IST
ಅಪ್ಪ-ತಂಗಿ ಕಾಂಗ್ರೆಸ್, ಪತ್ನಿ ಬಿಜೆಪಿ- ಇಕ್ಕಟ್ಟಿನಲ್ಲಿ ರವೀಂದ್ರ ಜಡೇಜಾ!

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿರುವ ರವೀಂದ್ರ ಜಡೇಜಾ ಮುಂಬರುವ ವಿಶ್ವಕಪ್ ಟೂರ್ನಿಯ ಚಿಂತೆಯಾಗಿದ್ದರೆ, ಜಡೇಜಾ ಕುಟುಂಬಸ್ಥರಿಗೆ ಲೋಕಸಭಾ ಚುನಾವಣೆ ಚಿಂತೆಯಾಗಿದೆ. ಕುಟುಂಬ ಸದಸ್ಯರ ನಿರ್ಧಾರ ಜಡ್ಡುಗೆ ಸಂಕಷ್ಟ ತಂದಿದೆ.  

ಜಾಮಾನಗರ್(ಏ.14): ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜಡೇಜಾ, ಮುಂಬರುವ ಲೋಕಸಭಾ ಚುನಾವಣೆಗಿಂತ, ವಿಶ್ವಕಪ್ ತಂಡ ಸೇರಿಕೊಳ್ಳೋ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಆದರೆ ಜಡೇಜಾ ಕುಟುಂಬ ಸದ್ಯರು ಒಂದೊಂದು ರಾಜಕೀಯ ಪಕ್ಷ ಸೇರೋ ಮೂಲಕ ಜಡ್ಡುಗೆ ಸಂಕಷ್ಠ ತಂದೊಡ್ಡಿದ್ದಾರೆ.

ಇದನ್ನೂ ಓದಿ: ಗೆದ್ದರೂ RCB ನಾಯಕ ಕೊಹ್ಲಿಗೆ ತಪ್ಪಲಿಲ್ಲ ಸಂಕಷ್ಟ!

ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಡೇಜಾ ತಂದೆ ಅನಿರುದ್ ಸಿನ್ಹ ಜಡೇಜಾ ಕಾಂಗ್ರೆಸ್ ಪಕ್ಷ ಸೇರಿಕೊಂಡ ಬೆನ್ನಲ್ಲೇ, ಜಡೇಜಾ ತಂಗಿ ನೈನಬಾ ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಧೋನಿ ಬೆನ್ನಿಗೆ ನಿಂತ ದಾದಾ

ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. ರೈತರಿಗಾಗಿ ಬಿಜೆಪಿ ಏನೂ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಿಕೊಂಡಿದ್ದೇನೆ. ಕಾಂಗ್ರೆಸ್ ಮುಂದಿನ 5 ವರ್ಷದಲ್ಲಿ ರೈತರ ಎಲ್ಲಾ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮ್ಯಾನ್ ಆಫ್‌ ದಿ ಮ್ಯಾಚ್ ನನಗಲ್ಲ, ಈ ಕ್ರಿಕೆಟಿಗನಿಗೆ ಸಿಗಬೇಕಿತ್ತು! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಸಂಜು ಸ್ಯಾಮ್ಸನ್!
Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!