ಇ-ತ್ಯಾಜ್ಯದಿಂದ ಸಿದ್ಧಗೊಳ್ಳುತ್ತಿದೆ ಟೋಕಿಯೋ ಒಲಿಂಪಿಕ್ಸ್ ಪದಕ!

By Web Desk  |  First Published Feb 10, 2019, 1:19 PM IST

ಇ-ತ್ಯಾಜ್ಯದಿಂದ ಸಿದ್ಧಗೊಳ್ಳುತ್ತಿದೆ ಟೋಕಿಯೋ ಒಲಿಂಪಿಕ್ಸ್ ಪದಕ!| ವಿಜೇತರಿಗೆ ನೀಡುವ ಪದಕಗಳೆಲ್ಲವೂ ಮರುಬಳಕೆಯಾದ ಇ-ತ್ಯಾಜ್ಯ ದಿಂದ ಸಿದ್ಧಪಡಿಸಿದ್ದಾಗಿರಲಿವೆ


ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಜೇತರಿಗೆ ನೀಡುವ ಪದಕಗಳೆಲ್ಲವೂ ಮರುಬಳಕೆಯಾದ ಇ-ತ್ಯಾಜ್ಯ ದಿಂದ ಸಿದ್ಧಪಡಿಸಿದ್ದಾಗಿರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಆಯೋಜನಾ ಸಮಿತಿ 2017ರಲ್ಲಿ ಸಾರ್ವಜನಿಕರಿಂದ ಇ-ತ್ಯಾಜ್ಯ ಸಂಗ್ರಹ ಮಾಡುವ ಯೋಜನೆಗೆ ಚಾಲನೆ ನೀಡಿತ್ತು. ಹಳೆಯ ಸ್ಮಾರ್ಟ್‌ಫೋನ್‌ಗಳು ಹಾಗೂ ಲ್ಯಾಪ್ ಟಾಪ್‌ಗಳೂ ಸಹ ಇದರಲ್ಲಿ ಸೇರಿವೆ. ಇದೇ ವೇಳೆ ಜಪಾನ್‌ನ ಉದ್ಯಮಿಗಳು ಹಾಗೂ ಕಾರ್ಖಾನೆಗಳಿಂದ ಲೋಹವನ್ನು ಸಂಗ್ರಹಿಸಲಾಗಿದೆ.

ಸಂಗ್ರಹ ಹೇಗೆ?:

Tap to resize

Latest Videos

ಜಪಾನ್‌ ದೇಶಾದ್ಯಂತ 2,400 ಎನ್‌ಟಿಟಿ ಡೊಕೊಮೊ ಟೆಲಿಕಾಮ್ ಅಂಗಡಿಗಳಲ್ಲಿ ಇರಿಸಿದ ಬುಟ್ಟಿಗಳಲ್ಲಿ ಹಳೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಕುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿತ್ತು.

ಚೀನಾ, ರಷ್ಯಾ, ಅಮೆರಿಕ ಸೇರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹೆಣ್ಮಕ್ಳೇ ಜಾಸ್ತಿ ಗುರೂ..!

ಪದಕಗಳು ಹೇಗೆ ಸಿದ್ಧಗೊಳ್ಳಲಿವೆ?

ಮೊಬೈಲ್ ಹಾಗೂ ಇನ್ನಿತರ ಉಪಕರಣಗಳಿಂದ ಚಿನ್ನ, ಬೆಳ್ಳಿ ಹಾಗೂ ಕಂಚನ್ನು ಹೊರತೆಗೆದು, ವಿಜೇತರಿಗೆ ನೀಡಲು ಬೇಕಿರುವ 5,000 ಪದಕಗಳನ್ನು ಸಿದ್ಧಪಡಿಸಲಾಗುವುದು. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ನೀಡಿದ ಶೇ.30ರಷ್ಟು ಪದಕಗಳನ್ನು ಇದೇ ರೀತಿ ಇ-ತ್ಯಾಜ್ಯಗಳಿಂದ ಸಿದ್ಧಪಡಿಸಲಾಗಿತ್ತು. ಕನ್ನಡಿ, ಎಕ್ಸ್-ರೇ ಪ್ಲೇಟ್ ಗಳಿಂದ ಬೆಳ್ಳಿ ಹೊರತೆಗೆಯಲಾಗಿತ್ತು. ಇದೇ ರೀತಿ ವಿವಿಧ ಹಳೆ ಉಪಕರಣಗಳಿಂದ ಚಿನ್ನ, ಕಂಚು ಸಹ ಸಂಸ್ಕರಣೆ ಮಾಡಲಾಗಿತ್ತು.

click me!