ಮುಷ್ತಾಕ್ ಆಲಿ T20: ದಾಖಲೆ ಬರೆದ ಬೆನ್ನಲ್ಲೇ ಮುಗ್ಗರಿಸಿದ ಕರ್ನಾಟಕ!

By Web Desk  |  First Published Nov 9, 2019, 5:57 PM IST

ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಸತತ ಗೆಲುವಿನ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿತ್ತು. ಆದರೆ ದಾಖಲೆ ಬರೆದ ಮರುದಿನವೇ ಸೋಲಿಗೆ ತುತ್ತಾಗಿದೆ. 


ವಿಶಾಖಪಟ್ಟಣಂ(ನ.09): ಸಯ್ಯದ್ ಮುಷ್ಕಾರ್ ಆಲಿ ಟಿ20 ಟೂರ್ನಿಯಲ್ಲಿ ಸತತ ಗೆಲುವಿನ ಮೂಲಕ ದಾಖಲೆ ಬರೆದದಿದ್ದ ಕರ್ನಾಟಕ ಇದೀಗ ಮೊದಲ ಸೋಲಿನ ಕಹಿ ಅನುಭವಿಸಿದೆ.  ಸತತ 15 ಗೆಲುವು ಸಾಧಿಸಿ ಮುನ್ನಗ್ಗಿದ ಕರ್ನಾಟಕ 16ನೇ ಪಂದ್ಯದಲ್ಲಿ ವಿರೋಚಿತ ಸೋಲು ಅನುಭವಿಸಿತು. ಬರೋಡಾ ವಿರುದ್ದ ಹೋರಾಡಿದ ಕರ್ನಾಟಕ 14 ರನ್‌ಗಳಿಂದ ಸೋಲು ಕಂಡಿದೆ. ಆದರೆ ಕರ್ನಾಟಕ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ದಾಖಲೆ ಜಯ!

Tap to resize

Latest Videos

undefined

ಮಹತ್ವದ ಪಂದ್ಯದಲ್ಲಿ ಬರೋಡಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ನಾಯಕ ಕೇದಾರ್ ದೇವಧರ್ ಅರ್ಧಶತಕ, ಆದಿತ್ಯ ವಾಗ್ಮೋಡೆ 32, ಸ್ವಪ್ನಿಲ್ ಸಿಂಗ್ 36 ಸಿಡಿಸಿದರು. ಅಂತಿಮ ಹಂತದಲ್ಲಿ ವಿಷ್ಣು ಸೋಲಂಕಿ ಅಜೇಯ 35 ಹಾಗೂ ಯುಸೂಫ್ ಪಠಾಣ್ ಅಜೇಯ 23 ರನ್ ಸಿಡಿಸಿದರು. ಈ ಮೂಲಕ ಬರೋಡಾ 4 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿತು.

ಇದನ್ನೂ ಓದಿ: ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!

ಬೃಹತ್ ಗುರಿ ಪಡೆದ ಕರ್ನಾಟಕ ಕೂಡ ದಿಟ್ಟ ತಿರುಗೇಟು ನೀಡಿತು. ರೋಹನ್ ಕದಮ್ 57 ಹಾಗೂ ಲುವ್ನೀತ್ ಸಿಸೋಡಿ 38 ರನ್ ಸಿಡಿಸೋ ಮೂಲಕ ಉತ್ತಮ ಆರಂಭ ನೀಡಿದರು.  ದೇವದತ್ ಪಡಿಕ್ಕಲ್ ಅಬ್ಬರಿಸಲಿಲ್ಲ. ನಾಯಕ ಕರುಣ್ ನಾಯರ್ 47 ರನ್ ಸಿಡಿಸಿದರು. ಆದರೆ ಇತರ ಬ್ಯಾಟ್ಸ್‌ಮನ್ ನೆರವಾಗಲಿಲ್ಲ.

ಶ್ರೇಯಸ್ ಗೋಪಾಲ್ 20 ರನ್ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕ 9 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿ 14 ರನ್ ಸೋಲು ಕಂಡಿದೆ. 
 

click me!