
ಹೈದರಾಬಾದ್(ಜೂ.28): ತೆಲಂಗಾಣದ ಯುವ ಆಟಗಾರ್ತಿ ಸಿಂಧೂಜಾ ರೆಡ್ಡಿ, ಅಮೆರಿಕ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 26 ವರ್ಷ ವಯಸ್ಸಿನ ಸಿಂಧೂಜಾ ನಲಗೊಂಡ ಜಿಲ್ಲೆಯ ಅಮಂಗಲ್ ಎಂಬ ಹಳ್ಳಿಯವರಾಗಿದ್ದಾರೆ. ಆಗಸ್ಟ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟಿ20 ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾಗವಹಿಸುವುದಕ್ಕಾಗಿ ಸಿಂಧೂಜಾ ಈಗಾಗಲೇ ಅಮೆರಿಕ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿರುವ ಸಿಂಧೂಜಾ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹೈದರಾಬಾದ್ ಪರ ಆಡಿದ್ದರು. ಸಿಂಧೂಜಾ 2020ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಮೆರಿಕ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಬಿ ಟೆಕ್ ಮತ್ತು ಎಂಬಿಎ ಪದವಿಧರೆಯಾಗಿರುವ ಸಿಂಧೂಜಾ ಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ 19 ವರ್ಷದೊಳಗಿನ ಹೈದರಾಬಾದ್ ತಂಡದ ನಾಯಕಿಯಾಗಿದ್ದರು. ಸಿಂಧೂಜಾ, ಸಿದ್ಧಾಥ್‌ರ್ ರೆಡ್ಡಿ ಎಂಬುವವರನ್ನು ಮದುವೆಯಾದ ಬಳಿಕ ಅಮೆರಿಕಕ್ಕೆ ತೆರಳಿದ ಸಿಂಧೂಜಾ, ಅಲ್ಲಿನ ಕ್ಲಬ್‌ಗಳಲ್ಲಿ ಆಡಲು ಆರಂಭಿಸಿದರು. ಸತತ ಪರಿಶ್ರಮದ ಫಲವಾಗಿ ಅಮೆರಿಕದ ತಂಡದಲ್ಲಿ ಸ್ಥಾನ ದೊರೆತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.