
ನವದೆಹಲಿ(ಜೂ.27): ಮೊಬೈಲ್ ತಯಾರಿಕ ಸಂಸ್ಥೆ ವೀವೋ 2018-2022ರ ಅವಧಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಉಳಿಸಿಕೊಂಡಿದ್ದು, ಬಿಸಿಸಿಐನೊಂದಿಗೆ ಬರೋಬ್ಬರಿ ₹2199 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.
ಕಳೆದ ಗುತ್ತಿಗೆ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಶೇ.554 ರಷ್ಟು ಏರಿಕೆ ಆಗಿರುವುದು ಅಚ್ಚರಿಗೆ ಮೂಡಿಸಿದೆ. 5 ವರ್ಷಗಳ ಅವಧಿಗೆ ಈ ಒಪ್ಪಂದವಿರಲಿದ್ದು, ವಾರ್ಷಿಕ ₹440 ಕೋಟಿ ಹಣ ಬಿಸಿಸಿಐ ಬೊಕ್ಕಸಕ್ಕೆ ಸೇರಲಿದೆ.
2008-12ರ ವರೆಗೂ ಡಿಎಲ್'ಎಫ್ ಸಂಸ್ಥೆ ವರ್ಷಕ್ಕೆ ₹40 ಕೋಟಿ ನೀಡುತ್ತಿತ್ತು, 2013-15ರ ವರೆಗೂ ಬಿಸಿಸಿಐಗೆ ಪೆಪ್ಸಿ ಸಂಸ್ಥೆಯಿಂದ ವಾರ್ಷಿಕ ₹79.2 ಕೋಟಿ ಬರುತ್ತಿತ್ತು.
2016-17ರ ಅವಧಿಯಲ್ಲಿ ವೀವೋ ₹100 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.