ವಿಚಿತ್ರ ವಿಡಿಯೋ ಶೇರ್ ಮಾಡಿದ ಸಚಿನ್: ನಿಮ್ಮ ಪ್ರಕಾರ ಇದು Out/ Not Out..?

Published : Jul 25, 2019, 04:17 PM IST
ವಿಚಿತ್ರ ವಿಡಿಯೋ ಶೇರ್ ಮಾಡಿದ ಸಚಿನ್: ನಿಮ್ಮ ಪ್ರಕಾರ ಇದು Out/ Not Out..?

ಸಾರಾಂಶ

ಕ್ರಿಕೆಟ್‌ನಲ್ಲಿ ಕೆಲವೊಂದು ಅಚ್ಚರಿಗಳು ಸಂಭವಿಸುವುದು ಸಾಮಾನ್ಯ. ಕೆಲವೊಮ್ಮೆ ಚೆಂಡು ವಿಕೆಟ್‌ಗೆ ಬಡಿದರೂ ಬೇಲ್ಸ್ ಬೀಳದೇ ಇರುವ ಸನ್ನಿವೇಷಕ್ಕೂ ಸಾಕ್ಷಿಯಾಗಿದ್ದೇವೆ. ಅಂತಹದ್ದೇ ಒಂದು ಅಪರೂಪದ ವಿಡಿಯೋವನ್ನು ಸಚಿನ್ ತೆಂಡುಲ್ಕರ್ ಹಂಚಿಕೊಂಡಿದ್ದು, ನೀವೇನಾದರೂ ಅಂಪೈರ್ ಆಗಿದ್ದರೆ ಯಾವ ತೀರ್ಪು ನೀಡುವಿರಿ ಎಂದು ಪ್ರಶ್ನಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಮುಂಬೈ[ಜು.25]: ವಿದೇಶಿ ಕ್ರಿಕೆಟ್ ಲೀಗ್ ಪಂದ್ಯವೊಂದರಲ್ಲಿ ಬೌಲರ್ ಎಸೆದ ಚೆಂಡು ವಿಕೆಟ್ ಗೆ ಬಡಿದರೂ ಬೇಲ್ಸ್ ಬೀಳದ ಕಾರಣ ಅಂಪೈರ್ ಔಟ್ ನೀಡಿಲ್ಲ. ವಿಕೆಟ್ ಮೇಲೆ ನಿಂತ ಬೇಲ್ಸ್’ನ್ನು ಸರಿಯಾಗಿ ನಿಲ್ಲಿಸಿ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಾರೆ.

ಸಚಿನ್ ತೆಂಡುಲ್ಕರ್‌ಗೆ ಐಸಿಸಿ ಹಾಲ್ ಆಫ್ ಫೇಮ್

31 ಸೆಕೆಂಡ್’ಗಳ ಈ ವಿಡಿಯೋವನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಒಬ್ಬ ಸ್ನೇಹಿತ ನನಗೆ ಈ ವಿಡಿಯೋ ಕಳಿಸಿದ್ದಾರೆ. ನೋಡುವುದಕ್ಕೆ ವಿಚಿತ್ರವಾಗಿದೆ. ಒಂದು ವೇಳೆ ನೀವೇ ಅಂಪೈರ್ ಆಗಿದ್ದರೆ ಯಾವ ನಿರ್ಣಯ ನೀಡುತ್ತೀರಾ ಎಂದು ಮಾಸ್ಟರ್ ಬ್ಲಾಸ್ಟರ್ ಪ್ರಶ್ನಿಸಿದ್ದಾರೆ.

ಸಚಿನ್ ಅವರ ಟ್ವೀಟ್’ಗೆ ಹಲವಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಶ್ರೀವಸ್ತ್ ಎನ್ನುವವರು ಬ್ಯಾಟ್ಸ್’ಮನ್ ಆರೆಸ್ಟ್, ಆದರೆ ಬೇಲ್ ಮೂಲಕ ರಿಲೀಸ್ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಟ್ವೀಟ್ ಮಾಡಿದ್ದು, ಇದು ಏನೇನು ಅಲ್ಲ. ನನ್ನ ಒಬ್ಬ ಸ್ನೇಹಿತ ಔಟ್ ಆಗಿದ್ದರು ಅಂಪೈರ್ ಔಟ್ ನೀಡಲಿಲ್ಲ. ಯಾಕೆಂದರೆ, ಬ್ಯಾಟ್ ಅವನದ್ದಾಗಿತ್ತು ಎಂದು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!