
ಜಮ್ಮು ಮತ್ತು ಕಾಶ್ಮೀರ(ಜು.25): ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಲು ಸಜ್ಜಾಗಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ, ಕಾಶ್ಮೀರ ಗಡಿ ಕಾಯಲಿದ್ದಾರೆ. ಜುಲೈ 31 ರಿಂದ ಆಗಸ್ಟ್ 15 ವರೆಗೆ ಧೋನಿ ಸಾಮಾನ್ಯ ಯೋಧರಂತೆ ದೇಶದ ಗಡಿ ಕಾಯಲಿದ್ದಾರೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಧೋನಿ ಗ್ಲೌಸ್ ವಿವಾದ: ಐಸಿಸಿ ಒತ್ತಡಕ್ಕೆ ಮಣಿದ ಬಿಸಿಸಿಐ!
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ್ ಹುದ್ದೆ ಹೊಂದಿರು ಧೋನಿ, ಇದೀಗ ಕಾಶ್ಮೀರ ಕಣಿವೆಯಲ್ಲಿ ವಿಕ್ಟರ್ ಫೋರ್ಸ್ ಸೇನಾ ತುಕುಡಿ ಜೊತೆ ಸೇವೆ ಸಲ್ಲಿಸಲಿದ್ದಾರೆ. ಧೋನಿ ಪ್ಯಾಟ್ರೋಲಿಂಗ್ ಗಾರ್ಡ್ ಡ್ಯೂಟಿಗೆ ಭಾರತೀಯ ಸೇನೆ ಅನುಮತಿ ನೀಡಿದೆ. ಜುಲೈ 31ರ ವರೆಗೆ ಧೋನಿಗೆ ಭಾರತೀಯ ಸೇನೆ ಯೋಧರ ತರಬೇತಿ ನೀಡಲಿದೆ.
ಇದನ್ನೂ ಓದಿ: ಸೇನೆಗೆ ಸೇರಿಕೊಳ್ಳಲು ಕ್ರಿಕೆಟ್‌ನಿಂದ ಬ್ರೇಕ್; ಧೋನಿಗೆ ಫ್ಯಾನ್ಸ್ ಸೆಲ್ಯೂಟ್!
2015ರಲ್ಲಿ ಆಗ್ರಾ ಸೇನಾ ಟ್ರೈನಿಂಗ್ ಕ್ಯಾಂಪ್‌ನಲ್ಲಿ 5 ಬಾರಿ ಪ್ಯಾರಾಚ್ಯೂಟ್ ಯಶಸ್ವಿ ಜಂಪ್ ಮಾಡಿರುವ ಧೋನಿ, ಸೇನಾ ಪ್ಯಾರಾಟ್ರೂಪರ್ ಆಗಿ ಅರ್ಹತೆ ಪಡೆದಿದ್ದಾರೆ. ಇದೀಗ ಯೋಧರ ತರಬೇತಿ ಪಡೆಯುತ್ತಿರುವ ಧೋನಿ, ಜುಲೈ 31 ರಿಂದ ಗಡಿ ಕಾಯಲಿದ್ದಾರೆ.
ಇದನ್ನೂ ಓದಿ: ವಿದಾಯದ ಬಳಿಕ ಭಾರತೀಯ ಸೇನೆಗೆ ಧೋನಿ; ಮ್ಯಾನೇಜರ್ ಬಿಚ್ಚಿಟ್ಟ ಸೀಕ್ರೆಟ್!
ಬಾಲ್ಯದಲ್ಲಿ ಭಾರತೀಯ ಸೇನೆ ಸೇರಬೇಕೆಂಬ ಗುರಿ ಇಟ್ಟುಕೊಂಡಿದ್ದ ಎಂ.ಎಸ್.ಧೋನಿ ಕ್ರಿಕೆಟರ್ ಆಗಿ ಮಿಂಚಿದರು. ಆದರೆ ಕ್ರಿಕೆಟ್ ಕರಿಯರ್‌ನಲ್ಲೂ ಧೋನಿ ಸೇನೆ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಸೇನೆಯ ಬಲಿದಾನ ಲಾಂಛನ ಹಾಕಿದ್ದರು. ಇದು ಐಸಿಸಿ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಲಾಂಛನ ತೆಗೆಯಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.