ಪದೇ ಪದೇ ಕೆಟ್ಟ ಹೊಡೆತ ಬಾರಿಸಿ ಕೈಸುಟ್ಟುಕೊಳ್ಳುತ್ತಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೇಲೆ ಕೋಚ್ ರವಿ ಶಾಸ್ತ್ರಿ ಸಿಡಿಮಿಡಿಗೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಧರ್ಮಶಾಲಾ[ಸೆ.16]: ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಬೇಜವಾಬ್ದಾರಿತನದ ಬ್ಯಾಟಿಂಗ್ ಮುಂದುವರಿಸಿದರೆ ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ.
2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!
undefined
ಇತ್ತೀಚಿನ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಅನವಶ್ಯಕವಾಗಿ ದುಬಾರಿ ಹೊಡೆತಗಳಿಗೆ ಯತ್ನಿಸಿ ಕೈಸುಟ್ಟುಕೊಂಡ ರಿಷಭ್ ತಂಡದ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದರು. ‘ಪದೇ ಪದೇ ಅನವಶ್ಯಕವಾಗಿ ವಿಕೆಟ್ ಚೆಲ್ಲಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಪ್ರತಿಭಾನ್ವಿತನೋ ಅಲ್ಲವೋ ಆತನನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?
‘ಪಂತ್ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು. ಅವರು ಐಪಿಎಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ತಮ್ಮಲ್ಲಿರುವ ಪ್ರತಿಭೆ ಎಂತದ್ದು ಎನ್ನುವುದನ್ನು ತೋರಿಸುವ ಸಮಯ ಬಂದಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ. ಪಂತ್ ಕಳೆದ 10 ಪಂದ್ಯಗಳಲ್ಲಿ ಒಮ್ಮೆಯೂ ಅರ್ಧಶತಕ ಸಿಡಿಸಿಲ್ಲ.