ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?

By Web Desk  |  First Published Sep 11, 2019, 11:51 AM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಮನಸ್ತಾಪವಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕೋಚ್ ರವಿಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಶಾಸ್ತ್ರಿ ಈ ವಿಚಾರದ ಬಗ್ಗೆ ಏನಂದ್ರು, ನೀವೇ ನೋಡಿ...


ನವದೆಹಲಿ[ಸೆ.11]: ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮಧ್ಯೆ ಮನಸ್ತಾಪದ ಸುದ್ದಿಯನ್ನು ಕೋಚ್‌ ರವಿಶಾಸ್ತ್ರಿ ಮತ್ತೊಮ್ಮೆ ತಳ್ಳಿಹಾಕಿದ್ದಾರೆ. 

ರಾಹುಲ್‌ ಬದಲು ರೋಹಿತ್‌ ಟೆಸ್ಟ್‌ ಓಪ​ನರ್‌?

Tap to resize

Latest Videos

undefined

‘ಅವರಿಬ್ಬರ ನಡುವೆ ಮನಸ್ತಾಪವಿದ್ದರೆ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ 5 ಶತಕ ಹೊಡೆಯಲು ಸಾಧ್ಯವಿತ್ತೇ? ಅವರಿಬ್ಬರು ಜೊತೆಯಾಟವಾಡಲು ಹೇಗೆ ಸಾಧ್ಯವಾಯಿತು? ಯಾವುದೇ ಮನಸ್ತಾಪಗಳಿಲ್ಲ’ ಎಂದು ರವಿಶಾಸ್ತ್ರಿ ಹೇಳಿ​ದ್ದಾರೆ. ‘ಒಂದು ತಂಡ ಎಂದ ಮೇಲೆ ಭಿನ್ನಾ​ಭಿ​ಪ್ರಾ​ಯಗಳು ಇರು​ವುದು ಸಾಮಾನ್ಯ. ಅದನ್ನು ಮನ​ಸ್ತಾಪ ಎಂದು ಕರೆ​ಯಲು ಸಾಧ್ಯ​ವಿಲ್ಲ. ಬೇರೆ ಬೇರೆ ಅಭಿ​ಪ್ರಾ​ಯ​ಗಳು ವ್ಯಕ್ತ​ವಾ​ದಾಗ ಮಾತ್ರ ತಂಡಕ್ಕೆ ಯಾವುದು ಒಳ್ಳೆ​ಯದು, ಯಾವ ನಿರ್ಧಾರ ಕೈಹಿ​ಡಿ​ಯು​ತ್ತದೆ ಎನ್ನು​ವು​ದನ್ನು ತಿಳಿ​ದು​ಕೊ​ಳ್ಳಲು ಸಾಧ್ಯ’ ಎಂದು ಶಾಸ್ತ್ರಿ ಹೇಳಿ​ದ್ದಾರೆ.

ಟ್ರೋಲಿಗರಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಕ್ಲಾಸ್!

ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾದ ದಿನದಿಂದಲೂ ರೋಹಿತ್-ಕೊಹ್ಲಿ ನಡುವೆ ಮನಸ್ತಾಪವಿದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇದೆ. ಇದಕ್ಕೆ ತೆರೆ ಎಳೆಯುವ ಪ್ರಯತ್ನವೂ ನಡೆಯುತ್ತಿದೆ.
 

click me!