ವಿಶ್ವ ಬಾಕ್ಸಿಂಗ್‌ ಕೂಟ: ಭಾರತ ಶುಭಾರಂಭ

By Kannadaprabha News  |  First Published Sep 11, 2019, 10:15 AM IST

ರಷ್ಯಾದಲ್ಲಿ ಆರಂಭವಾದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ರಷ್ಯಾ(ಸೆ.11): ವಿಶ್ವ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದೆ. ಭಾರತದ ಬ್ರಿಜೇಶ್‌ ಯಾದವ್‌ ಸೇರಿದಂತೆ ಅಮಿತ್‌ ಪಂಗಲ್‌, ಕವಿಂದರ್‌ ಸಿಂಗ್‌ ಬಿಶ್ತ್, ಆಶಿಶ್‌ ಕುಮಾರ್‌ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. 

ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್‌!

Tap to resize

Latest Videos

ಮಂಗಳವಾರ ನಡೆದ 81ಕೆ.ಜಿ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತದ ಬ್ರಿಜೇಶ್‌ ಯಾದವ್‌, ಪೋಲೆಂಡ್‌ನ ಮಲ್ಯುಸಜ್‌ ಗೊಯಿನ್ಸಕಿ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಸಾಧಿಸಿದರು. ಅಂತಿಮ 32ರ ಸುತ್ತಿನಲ್ಲಿ ಬ್ರಿಜೇಶ್‌, ಟರ್ಕಿಯ ಬೈರಮ್‌ ಮಾಲ್ಕನ್‌ರನ್ನು ಎದುರಿಸಲಿದ್ದಾರೆ. 

ಭೀಕರ ಪ್ರವಾಹದಲ್ಲಿ ಈಜಿ, ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬಾಕ್ಸರ್ !

ಉಳಿದಂತೆ ಮೂವರು ಭಾರತೀಯ ಬಾಕ್ಸರ್‌ಗಳಾದ ಅಮಿತ್‌ ಪಂಗಲ್‌, ಕವಿಂದರ್‌ ಸಿಂಗ್‌ ಬಿಶ್ತ್, ಆಶಿಶ್‌ ಕುಮಾರ್‌ ಮೊದಲ ಸುತ್ತಲ್ಲಿ ಬೈ ಪಡೆದಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 87 ರಾಷ್ಟ್ರಗಳ 450ಕ್ಕೂ ಹೆಚ್ಚು ಬಾಕ್ಸರ್‌ಗಳು ಪಾಲ್ಗೊಂಡಿ​ದ್ದಾರೆ.

click me!