
ಬೆಂಗಳೂರು[ಜು.26]: 2018ರ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಭಾರತಕ್ಕೆ ಕೂಟದ ಮೊದಲ ಪದಕವನ್ನು ವೇಟ್’ಲಿಫ್ಟಿಂಗ್ ವಿಭಾಗದಲ್ಲಿ ಗೆದ್ದುಕೊಟ್ಟ ಕನ್ನಡಿಗ ಗುರುರಾಜ್ ಪೂಜಾರಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸನ್ಮಾನಿಸಿ 25 ಲಕ್ಷ ರುಪಾಯಿ ಮೊತ್ತದ ಚೆಕ್ ವಿತರಿಸಿದರು. ಮಾತು ಮರೆತಿದ್ದ ಸರ್ಕಾರದ ಗಮನ ಸೆಳೆಯುವಲ್ಲಿ ಸುವರ್ಣನ್ಯೂಸ್.ಕಾಂ ಮೊಟ್ಟ ಮೊದಲ ಬಾರಿಗೆ ಗಮನ ಸೆಳೆದಿತ್ತು.
ಇದನ್ನು ಓದಿ: ಕಾಮನ್’ವೆಲ್ತ್ ಹೀರೋ ಗುರುರಾಜ್ ಪೂಜಾರಿಗೆ ನೆರವಿನ ಭರವಸೆಯಿತ್ತ ಸಿಎಂ
ಈ ಹಿಂದಿನ ರಾಜ್ಯ ಸರ್ಕಾರ ಗುರುರಾಜ್ ಪೂಜಾರಿಗೆ 25 ಲಕ್ಷ ನಗದು ಬಹುಮಾನ ಹಾಗೂ ಬಿ ದರ್ಜೆಯ ನೌಕರಿ ನೀಡುವುದಾಗಿ ಘೋಷಿಸಿ ಮರೆತಿತ್ತು. ಈ ವಿಚಾರವನ್ನು ಸುವರ್ಣನ್ಯೂಸ್.ಕಾಂ ಬೆಳಕಿಗೆ ತಂದಿತ್ತು. ಇದಾದ ಬಳಿಕ ಹಲೋ ಸಿಎಂ ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಮನಕ್ಕೆ ತರಲಾಗಿತ್ತು. ತಕ್ಷಣಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ 25 ಲಕ್ಷದ ಚೆಕ್ ವಿತರಿಸಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ಇದನ್ನು ಓದಿ: ಬೆಳ್ಳಿ ಗೆದ್ದ ಗುರುರಾಜ್'ಗೆ ರಾಜ್ಯ ಸರ್ಕಾರದಿಂದ ಬಂಪರ್ ಬಹುಮಾನ
ಸುವರ್ಣನ್ಯೂಸ್.ಕಾಂಗೆ ಕರೆ ಮಾಡಿದ ಗುರುರಾಜ್ ಪೂಜಾರಿ ಸುವರ್ಣನ್ಯೂಸ್ ಬಳಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.