ಅಭ್ಯಾಸ ಪಂದ್ಯ: ಅರ್ಧಶತಕ ಸಿಡಿಸಿದ ಕೊಹ್ಲಿ -ಮುರಳಿ ವಿಜಯ್

By Suvarna NewsFirst Published Jul 25, 2018, 7:12 PM IST
Highlights

ಎಸೆಕ್ಸ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಂಗ್ಲರ ವಿರುದ್ದ ಕಣಕ್ಕಿಳಿದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿದೆ? ತಂಡದ ಮೊತ್ತವೆಷ್ಟು? ಈ ಕುರಿತ ವಿವರ ಇಲ್ಲಿದೆ.

ಚೆಲ್ಮ್ಸ್‌ಫೋರ್ಡ್(ಜು.25): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಚೇತರಿಸಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮುರಳಿ ವಿಜಯ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡಿತು. ಧವನ್ ಡಕೌಟ್ ಆದರೆ, ಪೂಜಾರ 1 ರನ್ ಸಿಡಿಸಿ ನಿರ್ಗಮಿಸಿದರು. ಅಜಿಂಕ್ಯ ರಹಾನೆ 17 ರನ್ ಸಿಡಿಸಿ ಔಟಾದರು. 

ಮುರಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು. ಕೊಹ್ಲಿ ಹಾಗೂ ವಿಜಯ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ  ಟೀಂ ಇಂಡಿಯಾ ಇದೀಗ 147 ರನ್ ಗಡಿ ದಾಟಿತು.

 

Captain is up next to reach the 50 run mark here.

His half century has come off 67 deliveries. 127/3 in 38.3 overs. pic.twitter.com/GfKn4YAffc

— BCCI (@BCCI)

 

 

A calm and composed half century from off 104 deliveries. 120/3 in 36.2 overs pic.twitter.com/W6czLaG3up

— BCCI (@BCCI)

 

ಹಾಫ್ ಸೆಂಚುರಿ ಸಿಡಿದ ಬೆನ್ನಲ್ಲೇ ಮುರಳಿ ವಿಜಯ್ ವಿಕೆಟ್ ಪತನಗೊಂಡಿತು. ವಿಜಯ್ 7 ಬೌಂಡರ್ ನೆರವಿನಿಂದ 53 ರನ್ ಸಿಡಿಸಿ ಔಟಾದರು. ಇದರೊಂದಿಗೆ ಭಾರತದ 4ನೇ ವಿಕೆಟ್ ಪತನಗೊಂಡಿತು. 

ಆಗಸ್ಟ್ 1 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಹೀಗಾಗಿ ಇದಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯವನ್ನ ನಾಲ್ಕು ದಿನದಿಂದ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕಳಪೆ ಗುಣಮಟ್ಟದ ಪಿತ್, ಹಾಗೂ ಮೈದಾನದಿಂದ ಟೀಂ ಇಂಡಿಯಾ ಅಸಮಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಪಂದ್ಯವನ್ನ 4 ದಿನದಿಂದ 3 ದಿನಕ್ಕೆ ಸೀಮಿತಗೊಳಿಸಲಾಗಿದೆ.

ಇದನ್ನು ಓದಿ: 2017ರಲ್ಲಿ ದಾರಿಯಲ್ಲೇ ಮುಗಿಯುತ್ತಿತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕತೆ!

ಇದನ್ನು ಓದಿ:  ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!

click me!