
ಬೆಂಗಳೂರು(ಮೇ.01): ಐಸಿಸಿಯು ಏಕದಿನ ತಂಡಗಳ ನೂತನ ಶ್ರೇಯಾಂಕಪಟ್ಟಿಯನ್ನು ಪ್ರಕಟಿಸಿದ್ದು ದಕ್ಷಿಣ ಆಫ್ರಿಕಾ ತಂಡ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ದಕ್ಷಿಣ ಆಫ್ರಿಕಾಗಿಂತ 5 ಅಂಕ ಹಿಂದಿರುವ ಆಸ್ಟ್ರೇಲಿಯಾ ತಂಡವು ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇಂಗ್ಲೆಂಡ್ ತಂಡವೊಂದನ್ನು ಹೊರತುಪಡಿಸಿ ಉಳಿದ ಗರಿಷ್ಟ ಶ್ರೇಯಾಂಕ ಹೊಂದಿದ ಏಳು ತಂಡಗಳು ಇಂಗ್ಲೆಂಡ್ ಹಾಗೂ ವೇಲ್ಸ್'ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್'ಗೆ ನೇರವಾಗಿ ಅರ್ಹತೆ ಪಡೆಯಲಿವೆ.
ಪ್ರಸ್ತುತ ವೆಸ್ಟ್'ಇಂಡೀಸ್ ತಂಡವು 9 ಶ್ರೇಯಾಂಕದಲ್ಲಿದ್ದು ಚಾಂಪಿಯನ್ಸ್ ಟ್ರೋಫಿಯಿಂದ ಕೂಡಾ ಹೊರಬಿದ್ದಿದೆ. ಐಸಿಸಿ ನಿಯಮದಂತೆ ಸೆಪ್ಟೆಂಬರ್ 30, 2017ರ ವೇಳೆಗೆ ಶ್ರೇಯಾಂಕದಲ್ಲಿ ಟಾಪ್ 8 ತಂಡಗಳು ವಿಶ್ವಕಪ್'ಗೆ ಪಾಲ್ಗೊಳ್ಳಲು ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಹಾಗಾಗಿ ಐಸಿಸಿ ಏಕದಿನ ವಿಶ್ವಕಪ್'ಗೆ ವೆಸ್ಟ್'ಇಂಡೀಸ್ ನೇರಪ್ರವೇಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.
ನೂತನ ಶ್ರೇಯಾಂಕ ಪಟ್ಟಿ ಹೀಗಿದೆ:
1. ದಕ್ಷಿಣ ಆಫ್ರಿಕಾ 123
2. ಆಸ್ಟ್ರೇಲಿಯಾ 118
3. ಭಾರತ 117
4. ನ್ಯೂಜಿಲ್ಯಾಂಡ್ 115
5. ಇಂಗ್ಲೆಂಡ್ 109
6. ಶ್ರೀಲಂಕಾ 93
7. ಬಾಂಗ್ಲಾದೇಶ 91
8. ಪಾಕಿಸ್ತಾನ 88
9. ವೆಸ್ಟ್'ಇಂಡೀಸ್ 79
10. ಆಫ್ಘಾನಿಸ್ತಾನ 52
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.