
ನವದೆಹಲಿ(ಆ.09): ಇಂಗ್ಲೆಂಡ್‌ನ ಟಿ20 ಬ್ಲ್ಯಾಸ್ಟ್ ಟೂರ್ನಿಯಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕಾಲಿನ್ ಆ್ಯಕರ್‌ಮನ್ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸುವ ಮೂಲಕ, ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ಬರೀ ಬ್ಯಾಟ್ಸ್‌ಮನ್‌ಗಳ ಆಟ ಎನ್ನುವ ಮಾತನ್ನು ಸುಳ್ಳು ಮಾಡಿದ್ದಾರೆ.
ಕೆನಡಾ ಟಿ20: ವೇತನ ಸಿಗದ್ದಕ್ಕೆ ಪಂದ್ಯ ವಿಳಂಬ!
ಹೌದು, ಐಪಿಎಲ್ ಸೇರಿದಂತೆ ಹಲವು ಟಿ20 ಟೂರ್ನಿಗಳಲ್ಲಿ ಬ್ಯಾಟ್ಸ್‌ಮನ್‌ಗಳು ಹೊಡಿಬಡಿ ಆಟದ ಮೂಲಕ ಬೌಲರ್‌ಗಳ ಮಾರಣಹೋಮ ಮಾಡುವುದನ್ನು ನೋಡಿದ್ದೇವೆ. ಆದರೆ, ಇದಕ್ಕೆ ಅಪವಾದ ಎಂಬಂತೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕಾಲಿನ್ ಆ್ಯಕರ್‌ಮನ್ ಟಿ20 ಟೂರ್ನಿಯಲ್ಲಿ ಕಮಾಲ್ ಮಾಡಿದ್ದಾರೆ. ಇದುವರೆಗೂ ಯಾವುದೇ ಬೌಲರ್ ಟಿ20 ಇನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದಿರಲಿಲ್ಲ. ಲೀಸೆಸ್ಟರ್ ಪರ ಆಡುತ್ತಿರುವ ಕಾಲಿನ್, ಬರ್ಮಿಂಗ್‌ಹ್ಯಾಮ್ ವಿರುದ್ಧದ ಪಂದ್ಯದಲ್ಲಿ 18 ರನ್‌ಗೆ 7 ವಿಕೆಟ್ ಕಬಳಿಸಿದರು.
2 ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಕ್ರಿಕೆಟಿಗರಿವರು
ಹೀಗಿತ್ತು ನೋಡಿ ಆ 7 ವಿಕೆಟ್‌ಗಳು:
ಸೋಮರ್‌ಸೆಟ್ ಪರ ಮಲೇಷಾ ಕ್ರಿಕೆಟಿಗ ಅರುಲ್ ಸುಪ್ಪಯ್ಯ 2011ರಲ್ಲಿ ಗ್ಲಾಮೋರ್ಗನ್ ವಿರುದ್ಧ 5 ರನ್‌ಗೆ 6 ವಿಕೆಟ್ ಪಡೆದಿದ್ದು, ಈ ವರೆಗಿನ ದಾಖಲೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.