
ಬೆಂಗಳೂರು[ಸೆ.07]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತಿದ್ದು ಸಾಲಿಗೆ ಹೊಸದೊಂದು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗತೊಡಗಿದೆ. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕಹಿಸುದ್ದಿಯಾದರೆ, ಎಬಿ ಡಿವಿಲಿಯರ್ಸ್ ಫ್ಯಾನ್ಸ್’ಗೆ ಸಿಹಿ ಸುದ್ದಿಯಾಗಲಿದೆ.
ಐಪಿಎಲ್ 2019ನೇ ಋತುವಿಗೆ ಆರ್’ಸಿಬಿ ಭರ್ಜರಿ ಸಿದ್ಧತೆ ನಡೆಸಿದ್ದು, ಈಗಾಗಲೇ ಡೇನಿಯಲ್ ವೆಟ್ಟೋರಿಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಗ್ಯಾರಿ ಕರ್ಸ್ಟನ್‌ರನ್ನು
ನೇಮಿಸಿದೆ. ಜತೆಗೆ ಆಶಿಸ್ ನೆಹ್ರಾಗೂ ಕೋಚ್ ಸ್ಥಾನ ನೀಡಿದೆ.
ಇದನ್ನು ಓದಿ: ಐಪಿಎಲ್ 2019: ನಿರ್ಧಾರ ಪ್ರಕಟಿಸಿದ ಎಬಿ ಡಿವಿಲಿಯರ್ಸ್
ಇದೀಗ ಹಾಲಿ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ, ಸ್ಫೋಟಕ ಬ್ಯಾಟ್ಸ್’ಮನ್ ದ.ಆಫ್ರಿಕಾದ ಎಬಿ ಡಿವಿಲಿಯರ್ಸ್‌ರನ್ನು ಆ ಸ್ಥಾನಕ್ಕೆ ಕೂರಿಸಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿದೆ. 2008ರಿಂದಲೂ ಆರ್’ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ 2013ರಲ್ಲಿ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಕೊಹ್ಲಿ ನೇತೃತ್ವದಲ್ಲಿ ಇದುವರೆಗೆ ಆರ್’ಸಿಬಿ ಒಮ್ಮೆಯೂ ಕಪ್ ಎತ್ತಿಹಿಡಿಯಲು ಸಫಲವಾಗಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಂತೂ ಹೀನಾಯ ಪ್ರದರ್ಶನ ನೀಡಿದೆ.
ಇದನ್ನು ಓದಿ: ಆರ್’ಸಿಬಿ ತಂಡದ ನೂತನ ಕೋಚ್ ನೇಮಕ
ಇದುವರೆಗೂ ಐಪಿಎಲ್‌ನಲ್ಲಿ ಆರ್‌ಸಿಬಿ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಇದರಿಂದಾಗಿ ಕೊಹ್ಲಿ, ನಾಯಕತ್ವದ ಕುರಿತು ಪ್ರಶ್ನೆಗಳು ಎಂದಿದ್ದವು. ಈ ಹಿನ್ನೆಲೆಯಲ್ಲಿ ಡಿವಿಲಿಯರ್ಸ್‌ಗೆ ನಾಯಕ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಇದನ್ನು ಓದಿ: ಆರ್‌ಸಿಬಿ ತಂಡಕ್ಕೆ ಮೇಜರ್ ಸರ್ಜರಿ-ಹಲವರಿಗೆ ಕೊಕ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.