ಧವನ್ ಆಫ್ಘಾನ್ ಟೆಸ್ಟ್’ನ್ನು ಮಿಸ್ಟೇಕ್ ಮಾಡ್ಕೊಂಡ್ರಾ..? ಟ್ವಿಟರ್’ನಲ್ಲಿ ಗಬ್ಬರ್ ಸಿಂಗ್ ಗುಣಗಾನ

Published : Jun 14, 2018, 02:45 PM ISTUpdated : Jun 14, 2018, 03:33 PM IST
ಧವನ್ ಆಫ್ಘಾನ್ ಟೆಸ್ಟ್’ನ್ನು ಮಿಸ್ಟೇಕ್ ಮಾಡ್ಕೊಂಡ್ರಾ..? ಟ್ವಿಟರ್’ನಲ್ಲಿ ಗಬ್ಬರ್ ಸಿಂಗ್ ಗುಣಗಾನ

ಸಾರಾಂಶ

ಇಂಡೋ-ಆಫ್ಘಾನ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಮೊದಲ ದಿನದಾಟದಲ್ಲೇ ಬಿಗಿ ಹಿಡಿತ ಸಾಧಿಸಿದೆ.

ಬೆಂಗಳೂರು[ಜೂ.14]: ಇಂಡೋ-ಆಫ್ಘಾನ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಮೊದಲ ದಿನದಾಟದಲ್ಲೇ ಬಿಗಿ ಹಿಡಿತ ಸಾಧಿಸಿದೆ. ಊಟದ ವಿರಾಮಕ್ಕೂ ಮೊದಲೇ ಶತಕ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ 6ನೇ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಧವನ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಮತ್ತೊಂದು ಪ್ರತಿಭೆ ಅನಾವರಣ..!

ಅದರಲ್ಲೂ ಗಬ್ಬರ್’ಸಿಂಗ್ ಖ್ಯಾತಿಯ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ವೈಯುಕ್ತಿಕ 7ನೇ ಶತಕ ಪೂರೈಸಿದರು. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಮೂಡ್’ನಿಂದ ಇನ್ನೂ ಹೊರಬಂದಂತೆ ಕಾಣದ ಶಿಖರ್ ಧವನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 96 ಎಸೆತಗಳಲ್ಲಿ 107 ರನ್ ಸಿಡಿಸಿ ಮಿಂಚಿದರು. ಧವನ್ ಬ್ಯಾಟಿಂಗ್’ಅನ್ನು ಕಣ್ತುಂಬಿಕೊಂಡ ಟ್ವಿಟರಿಗರು ಧವನ್ ಆಫ್ಘಾನ್ ಟೆಸ್ಟ್ ಪಂದ್ಯವನ್ನು ಸನ್’ರೈಸರ್ಸ್ ಹೈದರಾಬಾದ್ ತಂಡದ ನೆಟ್ ಪ್ರಾಕ್ಟೀಸ್ ಎಂದು ತಪ್ಪಾಗಿ ಭಾವಿಸಿ ಬ್ಯಾಟ್ ಬೀಸುತ್ತಿದ್ದಾರೆ ತಮಾಶೆ ಮಾಡಿದ್ದಾರೆ. 

ಇದನ್ನೂ ಓದಿ: ಇಂಡೋ-ಆಫ್ಘಾನ್ ಟೆಸ್ಟ್: ಬೌಂಡರಿಗಳ ಸುರಿಮಳೆಯೊಂದಿಗೆ ಧವನ್ ಶತಕ

ಧವನ್ ಬ್ಯಾಟಿಂಗ್ ನೋಡಿ ಟ್ವಿಟರಿಗರು ತಲೆದೂಗಿದ್ದು ಹೀಗೆ..

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿದೇಶಿ ಗರ್ಲ್‌ಫ್ರೆಂಡ್‌ ಜತೆ ಗೋವಾದಲ್ಲಿ ಶಿಖರ್ ಧವನ್ ಎಂಗೇಜ್‌ಮೆಂಟ್! ಗಬ್ಬರ್‌ ಸಿಂಗ್ ಪೋಸ್ಟ್ ವೈರಲ್
ಈ ಮೂವರ ಐಪಿಎಲ್ ಸಂಬಳ, ಪಾಕಿಸ್ತಾನ ಸೂಪರ್‌ ಲೀಗ್‌ನ ಒಂದು ಫ್ರಾಂಚೈಸಿಗಿಂತ ಹೆಚ್ಚು!