ಭಾರತ-ಅಫ್ಘಾನ್ ಟೆಸ್ಟ್: ಐತಿಹಾಸಿಕ ಪಂದ್ಯಕ್ಕೆ ಮಳೆ ಅಡ್ಡಿ

First Published Jun 14, 2018, 2:00 PM IST
Highlights

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಂತೆ, ಅತ್ತ ಮಳೆರಾಯನ ಅರ್ಭಟ ಶುರುವಾಗಿದೆ. ಹೀಗಾಗಿ ಮೊದಲ ದಿನದಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು(ಜೂನ್.14): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಆದರೆ ದಿಢೀರ್ ಸುರಿದ ಮಳೆಯಿಂದಾಗಿ ಮೊದಲ ದಿನದಾಟ ತಾತ್ಕಾಲಿಕ ಸ್ಥಗಿತಗೊಂಡಿದೆ.

 

It has begun to rain here in Bengaluru as reach 248/1. Stay tuned for more updates pic.twitter.com/SFqe8wqQRU

— BCCI (@BCCI)

 

45.1 ಓವರ್‌ಗಳಲ್ಲಿ ಭಾರತ 1 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತ್ತು. ಮುರಳಿ ವಿಜಯ್ ಅಜೇ.ಯಯ 94 ರನ್ ಸಿಡಿಸಿ ಶತಕದತ್ತ ಮುನ್ನಗ್ಗುತ್ತಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಅಜೇಯ 33 ರನ್ ಸಿಡಿಸಿದ್ದರು. ಆದರೆ ಈ ವೇಳೆ ಸುರಿದ ಮಳೆಯಿಂದಾಗಿ ಮೊದಲ ದಿನದಾಟ ಸ್ಥಗಿತಗೊಂಡಿದೆ. 

ಇಂಡೋ-ಅಫ್ಘಾನ್ ಟೆಸ್ಟ್: 200 ರನ್ ಗಡಿ ದಾಟಿದ ಟೀಂಇಂಡಿಯಾ

click me!