
ಚೆನ್ನೈ[ಮೇ.22]: ‘ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಯಿಂದಾಗಿ ನಾನು ಐಪಿಎಲ್‌ನಲ್ಲಿ ಫಾರ್ಮ್‌ಗೆ ಮರಳಲು ಸಾಧ್ಯವಾಯಿತು’ ಎಂದು ತಂಡದ ಆಲ್‌ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ.
‘ಸಿಎಸ್‌ಕೆಯಂತಹ ತಂಡಕ್ಕೆ ಆಯ್ಕೆಯಾಗಿದ್ದು ನನ್ನ ಅದೃಷ್ಟ. ಟೂರ್ನಿಯುದ್ದಕ್ಕೂ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತ್ತು. ಜತೆಗೆ ತಂಡಕ್ಕೆ ಅಗತ್ಯವಿದ್ದಾಗ ಬೌಲಿಂಗ್ ನಿರ್ವಹಿಸಲು ಕೂಡ ಧೋನಿ ನನಗೆ ಅವಕಾಶ ನೀಡಿದರು’ ಎಂದು ವಾಟ್ಸನ್ ಹೇಳಿದ್ದಾರೆ.
‘ಧೋನಿ ಮೈದಾನದಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ, ಅವರ ತಂತ್ರಗಾರಿಕೆಯ ವಿಶೇಷತೆಗಳೇನು ಎನ್ನುವುದನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ’ ಎಂದಿರುವ ವಾಟ್ಸನ್, ಧೋನಿಯ ನಾಯಕತ್ವ ಗುಣಗಳನ್ನು ಕೊಂಡಾಡಿದ್ದಾರೆ.
36 ವರ್ಷದ ಶೇನ್ ವಾಟ್ಸನ್ ಚೆನ್ನೈ ಸೂಪರ್’ಕಿಂಗ್ಸ್ ಆಡಿದ 13 ಪಂದ್ಯಗಳಲ್ಲಿ 1 ಶತಕ ಹಾಗೂ 2 ಅರ್ಧಶತಕಗಳ ನೆರವಿನಿಂದ 438 ರನ್ ಬಾರಿಸಿದ್ದಾರೆ. ಅಲ್ಲದೇ ಬೌಲಿಂಗ್’ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.