
ಕರಾಚಿ[ಜ.03]: ಪಾಕಿಸ್ತಾನ ತಂಡಕ್ಕೆ ವಾಪಸಾಗಲು ಶಾಹಿದ್ ಅಫ್ರಿದಿ ಬಿಡಲಿಲ್ಲ ಎಂದು ಮಾಜಿ ನಾಯಕ, ಫಿಕ್ಸಿಂಗ್ ಸುಳಿಗೆ ಸಿಲುಕಿ 5 ವರ್ಷ ನಿಷೇಧಕ್ಕೊಳಗಾಗಿದ್ದ ಸಲ್ಮಾನ್ ಬಟ್ ಗಂಭೀರ್ ಆರೋಪ ಮಾಡಿದ್ದಾರೆ.
2010ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾಗಿದ್ದ ಸಲ್ಮಾನ್, 2015ರಲ್ಲಿ ನಿಷೇಧ ಅವಧಿ ಮುಕ್ತಾಯಗೊಂಡ ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. ಅತ್ಯುತ್ತಮ ಪ್ರದರ್ಶನ ತೋರಿ 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ‘ಕೋಚ್ ವಖಾರ್ ಯೂನಿಸ್ ನನ್ನನ್ನು ಕರೆದು ಫಿಟ್ನೆಸ್ ಟೆಸ್ಟ್ ನಡೆಸಿ ತಂಡಕ್ಕೆ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಾಯಕ ಅಫ್ರಿದಿ ನನ್ನ ಆಯ್ಕೆಗೆ ಒಪ್ಪಲಿಲ್ಲ’ ಎಂದು ಸಲ್ಮಾನ್ ಆರೋಪಿಸಿದ್ದಾರೆ.
ಕೆಎಲ್ ರಾಹುಲ್‌ಗಿಂತ ಉತ್ತಮ ಒಪನರ್ ಹುಡುಕಿಕೊಟ್ಟ ಅಭಿಮಾನಿ!
ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್’ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪಾಕ್ ಸೆಮೀಸ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ನಾಯಕ ಅಫ್ರಿದಿ ಹಾಗೂ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.