ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆತಿಥೇಯರಿಗೆ ಅವರದ್ದೇ ಶೈಲಿಯಲ್ಲಿ ಉತ್ತರಿಸುತ್ತಿರುವ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಭಾರೀ ಜನಪ್ರಿಯತೆ ಗಿಟ್ಟಿಸಿದ್ದಾರೆ.
ಸಿಡ್ನಿ[ಜ.03]: ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆತಿಥೇಯರಿಗೆ ಅವರದ್ದೇ ಶೈಲಿಯಲ್ಲಿ ಉತ್ತರಿಸುತ್ತಿರುವ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಭಾರೀ ಜನಪ್ರಿಯತೆ ಗಿಟ್ಟಿಸಿದ್ದಾರೆ.
ಮಂಗಳವಾರ ಭಾರತ ತಂಡ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ರನ್ನು ಭೇಟಿ ಮಾಡಿತ್ತು. ಆ ವೇಳೆ ಪ್ರತಿ ಆಟಗಾರರು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ರಿಷಭ್‌ರನ್ನು ನೋಡುತ್ತಿದ್ದಂತೆ ಪ್ರಧಾನಿ ಸ್ಕಾಟ್, ‘ಓ, ನೀವು ಸ್ಲೆಡ್ಜಿಂಗ್ ಮಾಡುತ್ತೀರಾ ಅಲ್ವಾ?. ನಿಮಗೆ ಸ್ವಾಗತ. ಸ್ಪರ್ಧಾತ್ಮಕ ಆಟವನ್ನು ನಾವೆಲ್ಲರೂ ಇಷ್ಟಪಡುತ್ತೇವೆ’ ಎಂದರು. ಪ್ರಧಾನಿಯ ಮಾತು ಪಂತ್ ಸೇರಿ ಎಲ್ಲರ ಮುಖದಲ್ಲೂ ನಗು ತರಿಸಿತು.
This is Epic 😂😂😂 Australian PM Asked From Pant About Sledging 😅😅
A post shared by Cricket Chamber (@cricket_chamber) on Jan 1, 2019 at 10:22pm PST
ಈ ಮೊದಲು ರಿಷಭ್ ಪಂತ್ ಆಸಿಸ್ ನಾಯಕ ಟಿಮ್ ಪೈನ್ ಅವರನ್ನು ಟೆಂಪ್ರವರಿ ಕ್ಯಾಪ್ಟನ್ ಎಂದು ಕರೆಯುವ ಮೂಲಕ ಕಾಲೆಳೆದಿದ್ದರು. ಅಲ್ಲದೇ ವಿಕೆಟ್ ಹಿಂದೆ ಆಸಿಸ್’ನ ಹಲವು ಬ್ಯಾಟ್ಸ್’ಮನ್’ಗಳಿಗೆ ಪಂತ್ ಸ್ಲೆಡ್ಜಿಂಗ್ ಮಾಡುವ ಮೂಲಕ, ಆಸಿಸ್ ನೆಲದಲ್ಲಿ ಅವರಿಗೆ ತಿರುಗೇಟು ನೀಡುವಲ್ಲಿ ಸಫಲವಾಗಿದ್ದರು.
ಭಾರತ ಈಗಾಗಲೇ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಸಿಡ್ನಿ ಟೆಸ್ಟ್’ನ ಮೊದಲ ದಿನವೂ ಭಾರತ, ಆಸಿಸ್ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಸಿಡ್ನಿ ಟೆಸ್ಟ್’ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು, ಮೊದಲ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 303 ರನ್ ಬಾರಿಸಿದೆ. ಚೇತೇಶ್ವರ್ ಪೂಜಾರ ಅಜೇಯ 130 ರನ್ ಬಾರಿಸಿ ಎರಡನೇ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.