ಅಭ್ಯಾಸ ಪಂದ್ಯದಲ್ಲಿ ರೋಹಿತ್‌ ಶೂನ್ಯ

By Web DeskFirst Published Sep 29, 2019, 10:31 AM IST
Highlights

ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ರೋಹಿತ್ ಶರ್ಮಾಗೆ ಆರಂಭಿಕ ಸ್ಥಾನ ನೀಡುವ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ರೋಹಿತ ಆರಂಭಿಕನಾಗಿ ಶೂನ್ಯಕ್ಕೆ ಔಟಾಗೋ ಮೂಲಕ, ಆರಂಭಿಕನ ಸಮಸ್ಯೆ ಹೆಚ್ಚಿಸಿದ್ದಾರೆ. 

ವಿಜಿ​ಯ​ನ​ಗ​ರಂ(ಸೆ.29) : ಅ.2 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಕೆ.ಎಲ್‌ ರಾಹುಲ್‌ ಬದಲು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯಲಿರುವ ರೋಹಿತ್‌ ಶರ್ಮಾ, ಇಲ್ಲಿ ಶನಿವಾರ ಮುಕ್ತಾಯವಾದ ದ.ಆಫ್ರಿಕಾ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. 

ಇದನ್ನೂ ಓದಿ: ಇಂಡೋ-ಆಫ್ರಿಕಾ ಟೆಸ್ಟ್: ಒಂದು ಸರಣಿ, ಇಬ್ಬರ ಭವಿಷ್ಯ ಡಿಸೈಡ್..!

ರೋಹಿತ್‌ ಆರಂಭಿಕನಾಗಿ ಯಶಸ್ಸು ಕಾಣುವುದಕ್ಕಾಗಿಯೇ ಈ ಅಭ್ಯಾಸ ಪಂದ್ಯದಲ್ಲಿ ರೋಹಿತ್‌ಗೆ ಆಡಿಸಲಾಗಿತ್ತು. ಆದರೆ ರೋಹಿತ್‌ (0) ಡಕ್‌ಔಟ್‌ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ರೋಹಿತ್‌ ವೈಫಲ್ಯದಿಂದಾಗಿ ಮತ್ತೆ ಭಾರತ ತಂಡಕ್ಕೆ ಆರಂಭಿಕನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. 

ಇದನ್ನೂ ಓದಿ: INDvSA 1ನೇ ಟೆಸ್ಟ್; ಪಂತ್ ಬದಲು ವೃದ್ಧಿಮಾನ್ ಸಾಹ?

ಮಂಡಳಿ ಅಧ್ಯಕ್ಷರ ಇಲೆವೆನ್‌ ಹಾಗೂ ದ.ಆಫ್ರಿಕಾ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಅಧ್ಯಕ್ಷರ ಇಲೆವೆನ್‌ ಪರ ಪ್ರಿಯಾಂಕ್‌ ಪಾಂಚಾಲ್‌ (60), ಭರತ್‌ (71) ರನ್‌ ಗಳಿ​ಸಿ​ದರು.
ಸ್ಕೋರ್‌: ದ.ಆ​ಫ್ರಿಕಾ 279/6 ಡಿ. ಮಂಡಳಿ ಅಧ್ಯ​ಕ್ಷರ ಇಲೆ​ವನ್‌ 265/8

click me!