ತೆಂಡುಲ್ಕರ್, ಲಕ್ಷ್ಮಣ್’ಗೆ BCCI ಸಮನ್ಸ್..!

By Web DeskFirst Published May 7, 2019, 11:41 AM IST
Highlights

 ಸ್ವ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿದ್ದಾರೆನ್ನುವ ಆಕ್ಷೇಪ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್’ಗೆ ಬಿಸಿಸಿಐ ನೋಟಿಸ್ ನೀಡಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನವದೆಹಲಿ[ಮೇ.07]: ಲಾಭದಾಯಕ ಹುದ್ದೆ ಹೊಂದುವುದರೊಂದಿಗೆ ಸ್ವ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿದ್ದಾರೆನ್ನುವ ಆಕ್ಷೇಪ ಎದುರಿಸುತ್ತಿರುವ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಓಂಬುಡ್ಸ್‌ಮನ್ ಮತ್ತು ಎಥಿಕ್ಸ್ ಅಧಿಕಾರಿ ನ್ಯಾ.ಡಿ.ಕೆ. ಜೈನ್ ನೋಟಿಸ್ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್’ನಿಂದ ಸಚಿನ್‌ಗಿಲ್ಲ ಸಂಭಾವನೆ!

ಅಲ್ಲದೆ, ಮೇ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದೇ ವೇಳೆ ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಹಾಗೂ ಈ ಬಗ್ಗೆ ದೂರು ನೀಡಿದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸಂಜೀವ್ ಗುಪ್ತಾ ಅವರಿಗೂ ನೋಟಿಸ್ ನೀಡಲಾಗಿದೆ. 

ಬಿಸಿಸಿಐ ಆಡಳಿತ ಸಮಿತಿ ವಿರುದ್ಧ ಲಕ್ಷ್ಮಣ್‌ ಗರಂ!

ಗುಪ್ತಾ ನೀಡಿರುವ ದೂರಿನಲ್ಲಿ ತೆಂಡುಲ್ಕರ್, ಲಕ್ಷ್ಮಣ್ ಎರಡು ಲಾಭದಾಯಕ ಹುದ್ದೆಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದುಕೊಂಡು ಐಪಿಎಲ್ ತಂಡಗಳಿಗೆ ಸಲಹೆಗಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿರುವ ಸಚಿನ್ ಮತ್ತು ಲಕ್ಷ್ಮಣ್ ಅವರು ಈಗಾಗಲೇ ಓಂಬುಡ್ಸ್’ಮನ್ ನ್ಯಾ.ಜೈನ್ ಅವರಿಗೆ ಪತ್ರ ಮುಖೇನ ಉತ್ತರಿಸಿದ್ದಾರೆ. 
 

click me!