ಮಂಧಾನ ಅಬ್ಬರ, ಕನ್ನಡತಿಯ ಸ್ಪಿನ್ ಮೋಡಿ-ಟ್ರೈಲ್‌ಬ್ಲೇಜರ್ಸ್‌ಗೆ 2 ರನ್ ಗೆಲುವು!

Published : May 06, 2019, 10:45 PM ISTUpdated : May 07, 2019, 10:05 AM IST
ಮಂಧಾನ ಅಬ್ಬರ, ಕನ್ನಡತಿಯ ಸ್ಪಿನ್ ಮೋಡಿ-ಟ್ರೈಲ್‌ಬ್ಲೇಜರ್ಸ್‌ಗೆ 2 ರನ್ ಗೆಲುವು!

ಸಾರಾಂಶ

ಮಹಿಳಾ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ರೋಚಕತೆ ಹೆಚ್ಚಿಸಿತು.  ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್ ಗೆಲುವಿನ ನಗೆ ಬೀರಿದರೆ, ಸೂಪರ್‌ನೋವಾಸ್ ಸೋಲಿನ ಕಹಿ ಅನುಭವಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಜೈಪುರ(ಮೇ.06): ಮಹಿಳಾ ಐಪಿಎಲ್ ಮೊದಲ ಪ್ರದರ್ಶನ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್ ಶುಭಾರಂಭ ಮಾಡಿದೆ. ನಾಯಕಿ ಸ್ಮೃತಿ ಮಂಧಾನ ಸಿಡಿಸಿದ 90 ರನ್ ಹಾಗೂ ಕನ್ನಡಿತಿ ರಾಜೇಶ್ವರಿ ಗಾಯಕ್ವಾಡ್ ಸ್ಪಿನ್ ಮೋಡಿಯಿಂದ ಟ್ರೈಲ್‌ಬ್ಲೇಜರ್ಸ್, ಎದುರಾಳಿ  ಸೂಪರ್‌ನೋವಾಸ್ ವಿರುದ್ಧ 2 ರೋಚಕ ರನ್ ಗೆಲುವು ಸಾಧಿಸಿದೆ.

ಗೆಲುವಿಗೆ 141 ರನ್ ಟಾರ್ಗೆಟ್ ಪಡೆದ ಸೂಪರ್‌ನೋವಾಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಪ್ರಿಯಾ ಪೂನಿಯಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಜೇಮಿ ರೋಡಿಗ್ರಸ್ ಹಾಗೂ ಚಾಮಾರಿ ಅಟ್ಟಪಟ್ಟು 49 ರನ್‌ಗಳ ಜೊತೆಯಾಟ ನೀಡಿದರು. ರೋಡಿಗ್ರಸ್ 24 ರನ್ ಸಿಡಿಸಿ ಔಟಾದರೆ, ಚಾಮಾರಿ 26 ರನ್ ಕಾಣಿಕೆ ನೀಡಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಆಸರೆಯಾದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ನತಾಲಿ ಕ್ಸೇವಿಯರ್ 1 ರನ್ ಸಿಡಿಸಿ ಔಟಾದರು. ಇನ್ನು ಸೋಫಿ ಡಿವೈನ್ ಹಾಗೂ ಹರ್ಮನ್ ತಿರುಗೇಟು ನೀಡೋ ಪ್ರಯತ್ನ ಮಾಡಿದರು. ಹರ್ಮನ್‌ಪ್ರೀತ್ ಕೌರ್ ಏಕಾಂಗಿ ಹೋರಾಟ ನೀಡಿದರೂ ಗೆಲವು ಸಾಧಿಸಲಿಲ್ಲ. ಡಿವೈನ್ 32 ರನ್ ಸಿಡಿಸಿ ಔಟಾದರು. ಹರ್ಮನ್‌ಪ್ರೀತ್ ಕೌರ್ ಅಜೇಯ 46 ರನ್ ಸಿಡಿಸಿದರು. 6 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿ ಕೇವಲ 2 ರನ್‌ಗಳೊಂದಿಗೆ ಸೋಲೊಪ್ಪಿಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA 3rd T20I: ಹರಿಣಗಳಿಗೆ ತಿರುಗೇಟು ನೀಡುತ್ತಾ ಟೀಂ ಇಂಡಿಯಾ?
ಲಿಯೋನೆಲ್ ಮೆಸ್ಸಿ ನೋಡಲಾಗದೇ ರೊಚ್ಚಿಗೆದ್ದ ಕೋಲ್ಕತಾ! ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಪೊಲೀಸರಿಂದ ಲಾಠಿಚಾರ್ಜ್