ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!

Published : May 17, 2019, 03:18 PM ISTUpdated : May 17, 2019, 03:19 PM IST
ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗರಿಷ್ಠ ಹಿರಿಯ ಕ್ರಿಕೆಟಿಗರನ್ನು ಹೊಂದಿದೆ. ಈ ಐಪಿಎಲ್ ಬಳಿಕ ಕೆಲ ಕ್ರಿಕೆಟಿಗರು ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ , ಹಿರಿಯ ಕ್ರಿಕೆಟಿಗನೊಬ್ಬ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸಿಡ್ನಿ(ಮೇ.17): ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಎಂ.ಎಸ್.ಧೋನಿ, ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಹಿರಿಯ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ವರ್ಷ ಐಪಿಎಲ್ ಟೂರ್ನಿಗೆ ಹಲವು ಕ್ರಿಕೆಟಿಗರು ಅಲಭ್ಯರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ CSK ತಂಡ ಸ್ಟಾರ್ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಮುಂದಿನ ವರ್ಷ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: IPLನಲ್ಲಿ ಸಿಗಲಿಲ್ಲ ಚಾನ್ಸ್; ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ..!

ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಬಳಿಕ ಲೀಗ್ ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳತ್ತಿದ್ದ ಶೇನ್ ವ್ಯಾಟ್ಸನ್ ಈಗಾಗಲೇ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಗೆ ವಿದಾಯ ಹೇಳಿದ್ದಾರೆ. ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಮತ್ತಷ್ಟು ಬಲಿಷ್ಠ ಆಟಗಾರನಾಗಿ ಕಣಕ್ಕಿಳಿಯುತ್ತೇನೆ ಎಂದು ವ್ಯಾಟ್ಸನ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ದೇವರ ಕೋಣೆಯಲ್ಲಿ IPL ಟ್ರೋಫಿ ಇಟ್ಟು ಭಜನೆ ಮಾಡಿದ ನೀತಾ ಅಂಬಾನಿ!

2019ರ ಐಪಿಎಲ್ ಟೂರ್ನಿ ಆರಂಭಿಕ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ ವ್ಯಾಟ್ಸನ್ ಪ್ಲೇ ಆಫ್ ಪಂದ್ಯದಳಲ್ಲಿ ಅದ್ಬುತ ಕಮ್‌ಬ್ಯಾಕ್ ಮಾಡಿದ್ದರು. ಫೈನಲ್ ಪಂದ್ಯದಲ್ಲಿ ವ್ಯಾಟ್ಸನ್ 59 ಎಸೆತದಲ್ಲಿ 80 ರನ್ ಸಿಡಿಸಿದ್ದರು. ವ್ಯಾಟ್ಸನ್ ಅದ್ಬುತ ಹೋರಾಟ ನೀಡಿದರು. ಆದರೆ ವ್ಯಾಟ್ಸನ್ ವಿಕೆಟ್ ಪತನದ ಬಳಿಕ CSK ಕೇವಲ 1 ರನ್‌ಗಳಿಂದ ಸೋಲು ಅನುಭವಿಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!